ಕರ್ನಾಟಕ

karnataka

ETV Bharat / state

ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮನನೊಂದು ನೌಕರ ವಿಷ ಸೇವಿಸಿ ಆತ್ಮಹತ್ಯೆ ಯತ್ನ - ಸಿಡಿಪಿಒ ಕಚೇರಿಯಲ್ಲೇ ಆತ್ಮಹತ್ಯೆ ಯತ್ನ

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮನನೊಂದು ಸಿಡಿಪಿಒ ಕಚೇರಿಯಲ್ಲೇ ನೌಕರನೊಬ್ಬ ವಿಷ ಸೇವಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ನಡೆದಿದೆ.

ಕೆಲಸದಿಂದ ವಜಾಗೊಳಿಸಿದ್ದಕ್ಕೆ ನೌಕರ  ಆತ್ಮಹತ್ಯೆ ಯತ್ನ

By

Published : Oct 5, 2019, 9:26 PM IST

ಚಾಮರಾಜನಗರ: ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮನನೊಂದು ಸಿಡಿಪಿಒ ಕಚೇರಿಯಲ್ಲೇ ನೌಕರನೊಬ್ಬ ವಿಷ ಸೇವಿಸಿರುವ ಘಟನೆ ಸಂತೇಮರಹಳ್ಳಿಯಲ್ಲಿ ನಡೆದಿದೆ.

ಸಂತೇಮರಹಳ್ಳಿ ಸಿಡಿಪಿಒ ಕಚೇರಿಯಲ್ಲಿ ಮೆಸೆಂಜರ್ ಹುದ್ದೆಯಲ್ಲಿದ್ದ ರಾಜೇಶ್(ಹೆಸರು ಬದಲಿಸಿದೆ)​ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನೌಕರ. ಸದ್ಯ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಕಾರಣಗಳನ್ನು ನೀಡದೇ ಏಕಾಏಕಿ ಸಿಡಿಪಿಒ ಇವರನ್ನು ವಜಾಗೊಳಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ‌.

ಕೆಲಸದಿಂದ ವಜಾಗೊಳಿಸಿದ್ದಕ್ಕೆ ನೌಕರ ಆತ್ಮಹತ್ಯೆ ಯತ್ನ

ಇನ್ನು ಸಿಡಿಪಿಒ ಕಾರಣವಿಲ್ಲದೇ ನನ್ನ ಪತಿಯನ್ನೇ ಉದ್ಯೋಗದಿಂದ ವಜಾಗೊಳಿಸಿದ್ದಾರೆ.ಅವರ ವಿರುದ್ಧ ಸೂಕ್ತ ಕ್ರಮಗೊಂಡು ಪತಿಗೆ ನ್ಯಾಯ ಕೊಡಿಸಬೇಕು ಎಂದು ಆತ್ಮಹತ್ಯೆಗೆ ಯತ್ನಿಸಿದ ನೌಕರನ ಪತ್ನಿ ಒತ್ತಾಯಿಸಿದ್ದಾರೆ.

ABOUT THE AUTHOR

...view details