ಚಾಮರಾಜನಗರ :ರಾತ್ರಿ ಹೊತ್ತು ಬೆಳೆ ಕಾವಲಿಗಿದ್ದ ರೈತನೋರ್ವ ಆನೆ ದಾಳಿಗೆ ಬಲಿಯಾಗಿರುವ ಘಟನೆ ತಾಲೂಕಿನ ಯಣಗುಂಬ ಗ್ರಾಮದಲ್ಲಿ ನಡೆದಿದೆ.
ಬೆಳೆ ಕಾಯಲು ಹೋಗಿದ್ದ ರೈತನನ್ನ ಕಾಲಿನಲ್ಲಿ ತುಳಿದು ಕೊಂದ ಆನೆ - farmer died by elephant attack
ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳವನ್ನು ಕಾಯುವ ವೇಳೆ ಆಹಾರ ಅರಸಿ ಬಂದ ಆನೆಯೊಂದು ತುಳಿದು ಬಿಸಾಡಿದೆ..
ಕಾಡಾನೆ ದಾಳಿಗೆ ರೈತ ಬಲಿ
ಗ್ರಾಮದ ಬೆಳ್ಳೇಗೌಡ ಎಂಬುವರ ಮಗ ಸ್ವಾಮಿ ಎಂಬಾತ ಮೃತಪಟ್ಟ ದುರ್ದೈವಿ. ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳವನ್ನು ಕಾಯುವ ವೇಳೆ ಆಹಾರ ಅರಸಿ ಬಂದ ಆನೆಯೊಂದು ತುಳಿದು ಬಿಸಾಡಿದೆ.
ಇನ್ನು, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ಶಾಸಕ ಪುಟ್ಟರಂಗಶೆಟ್ಟಿ ಬರಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.