ಕರ್ನಾಟಕ

karnataka

ETV Bharat / state

'ಅಭಿವೃದ್ಧಿಗಾಗಿ ಮತ ಚಲಾಯಿಸಿ': 92 ವರ್ಷದ ಮಾದಮ್ಮ ಜಾಮರಾಜನಗರ ಚುನಾವಣಾ ರಾಯಭಾರಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾದಮ್ಮ ಇತ್ತೀಚೆಗೆ ತಮ್ಮ ಗ್ರಾಮಕ್ಕೆ ವಿದ್ಯುತ್​ ಸೌಲಭ್ಯಕ್ಕಾಗಿ ಹೋರಾಟ ನಡೆಸಿ ಸುದ್ದಿಯಾಗಿದ್ದರು.

92 year old Madamma selected as voter ambassador
ಮತದಾರರ ರಾಯಭಾರಿಯಾಗಿ 92 ವರ್ಷದ ಮಾದಮ್ಮ ಆಯ್ಕೆ

By

Published : Apr 4, 2023, 4:57 PM IST

Updated : Apr 4, 2023, 6:03 PM IST

ಮತದಾರರ ರಾಯಭಾರಿಯಾಗಿ 92 ವರ್ಷದ ಮಾದಮ್ಮ ಆಯ್ಕೆ

ಚಾಮರಾಜನಗರ:ಸೂಲಗಿತ್ತಿ ಮತ್ತು ಬುಡಕಟ್ಟು ವೈದ್ಯ ಪದ್ಧತಿಯನ್ನು ಪ್ರೋತ್ಸಾಹಿಸುವ ಮೂಲಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ 92 ವರ್ಷದ ಸೋಲಿಗ ಸಮುದಾಯದ ಮಾದಮ್ಮ ಚಾಮರಾಜನಗರ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಮಾದಮ್ಮ ಇತ್ತೀಚೆಗೆ ಹನೂರು ತಾಲೂಕಿನ ಜೀರಿಗೆ ದೊಡ್ಡಿ ಗ್ರಾಮಕ್ಕೆ ವಿದ್ಯುತ್ ಪೂರೈಕೆಗಾಗಿ ಹೋರಾಟ ನಡೆಸಿದ್ದರು. ಇದನ್ನರಿತ ವಸತಿ ಖಾತೆ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಲಭ್ಯವಾಗಿತ್ತು.

ಮಾದಮ್ಮ ಅವರು ಮತದಾನದ ಮಹತ್ವ ಹಾಗೂ ಮತದಾರರಿಗೆ ತಮ್ಮ ಹಕ್ಕು ಚಲಾಯಿಸುವಂತೆ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ. "ಮತದಾನ ನಮ್ಮ ಹಕ್ಕು. ದೇಶದ ಹಿತದೃಷ್ಟಿಯಿಂದ ಮತದಾನ ಒಳ್ಳೆಯದು. ನಮ್ಮ ಅಭಿವೃದ್ಧಿಗಾಗಿ ನಾವು ಮತ ಚಲಾಯಿಸಬೇಕು" ಎಂದು ಅವರು ಕರೆ ನೀಡಿದ್ದಾರೆ.

ಏಪ್ರಿಲ್ 7 ರಿಂದ ಸ್ವೀಪ್‌ ಸಮಿತಿ ತನ್ನ ಚಟುವಟಿಕೆಗಳನ್ನು ಬಿರುಸುಗೊಳಿಸಲಿದ್ದು, ತಿಂಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಬೃಹತ್‌ ಎಲ್‌ಇಡಿ ಪರದೆ ಅಳವಡಿಸಿರುವ ಜಾಗೃತಿ ರಥವನ್ನು ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿದ್ದು, ಇದೇ 7 ರಂದು ಜಾಗೃತಿ ರಥಕ್ಕೆ ಚಾಲನೆ ಸಿಗಲಿದೆ. ಮತದಾನದವರೆಗೂ ಈ ವಾಹನ ಜಿಲ್ಲೆಯಾದ್ಯಂತ ಸುತ್ತಾಟ ನಡೆಸಿ, ಅರ್ಹ ಮತದಾರರೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಜಾಗೃತಿ ಮೂಡಿಸಲಿದೆ.

ಇದನ್ನೂ ಓದಿ:ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್​ ಆಗಿ ಖ್ಯಾತ ನಿರ್ದೇಶಕ ರಾಜಮೌಳಿ ಆಯ್ಕೆ

Last Updated : Apr 4, 2023, 6:03 PM IST

ABOUT THE AUTHOR

...view details