ಚಾಮರಾಜನಗರ:ಕಟಾವಿಗೆ ಬಂದು ಇನ್ನೇನು ಎರಡು-ಮೂರು ದಿನಗಳಲ್ಲಿ ಫಸಲು ಮಾರಾಟ ಮಾಡಬಹುದು ಎಂದುಕೊಳ್ಳುವಷ್ಟರಲ್ಲಿ ವಿದ್ಯುತ್ ಪ್ರವಹಿಸಿ 7 ಎಕರೆ ಕಬ್ಬು ಸುಟ್ಟು ಕರಕಲಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಬಂಡೀಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಟಾವಿಗೆ ಬಂದಿದ್ದ 7 ಎಕರೆ ಕಬ್ಬು ವಿದ್ಯುತ್ ಶಾಕ್ಗೆ ಬೆಂಕಿಗಾಹುತಿ - ಚಾಮರಾಜನಗರದಲ್ಲಿ ಕಬ್ಬಿನ ಗದ್ದಿಗೆ ಬೆಂಕಿಗೆ ನಷ್ಟ
ಕಟಾವಿಗೆ ಬಂದಿದ್ದ 7 ಎಕರೆ ಕಬ್ಬು ವಿದ್ಯುತ್ ಶಾಕ್ಗೆ ಬೆಂಕಿಗಾಹುತಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
7 ಎಕರೆ ಕಬ್ಬು ವಿದ್ಯುತ್ ಶಾಕ್ಗೆ ಬೆಂಕಿಗಾಹುತಿ
ಗ್ರಾಮದ ಮನು ಎಂಬವರಿಗೆ ಸೇರಿದ 10 ಎಕರೆ ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶಕ್ಕೆ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ 7 ಎಕರೆ ಫಸಲಗೂ ವ್ಯಾಪಿಸಿ ಕಟಾವಿಗೆ ಬಂದಿದ್ದ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ.
ವಿಚಾರ ತಿಳಿದ ಅಗ್ನಿಶಾಮಕ ಸಿಬ್ಬಂದಿ ಎರಡು ಫೈರ್ ಎಂಜಿನ್ ಮೂಲಕ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಚೆಸ್ಕಾಂ ಸಿಬ್ಬಂದಿ ಬೇಜವಾಬ್ದಾರಿತನದಿಂದ ರೈತ ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿಗೆ ಬಂದಿದ್ದಾನೆ.