ಕರ್ನಾಟಕ

karnataka

ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 2ನೇ ಹಂತಕ್ಕೆ ಕಾಲಿಟ್ಟ ಹುಲಿ ಗಣತಿ

By

Published : Dec 4, 2021, 2:22 PM IST

ಉತ್ತಮ ಮಳೆಯಾಗಿರುವ ಹಿನ್ನೆಲೆ ಮೇವು ಸೇರಿದಂತೆ ನೂರಾರು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಹಾಗಾಗಿ, ಅಲ್ಲಲ್ಲಿ ಹುಲಿ ಸೇರಿದಂತೆ ವನ್ಯಪ್ರಾಣಿಗಳು ಓಡಾಡಿರುವ ಗುರುತುಗಳು ಪತ್ತೆಯಾಗಿವೆ. ಇದರಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿ ಸಿಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ..

tiger census at Malay Mahadeshwara Wildlife Sanctuary
ರಾಷ್ಟ್ರೀಯ ವನ್ಯಪ್ರಾಣಿಗಳ ಕ್ಯಾಮೆರಾ ಟ್ರ್ಯಾಪಿಂಗ್ ಗಣತಿ

ಚಾಮರಾಜನಗರ :ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದಲ್ಲಿ ರಾಷ್ಟ್ರೀಯ ವನ್ಯಪ್ರಾಣಿಗಳ ಕ್ಯಾಮೆರಾ ಟ್ರ್ಯಾಪಿಂಗ್ ಗಣತಿ ಮೊದಲ ಹಂತ ಮುಕ್ತಾಯಗೊಂಡು 2ನೇ ಹಂತಕ್ಕೆ ಕಾಲಿಟ್ಟಿದೆ.

ಮಹದೇಶ್ವರಬೆಟ್ಟ ವನ್ಯಜೀವಿ ಧಾಮ ವಲಯ 906 ಎಕರೆ ವಿಸ್ತೀರ್ಣ ಹೊಂದಿದೆ. ಹನೂರು, ಮಹದೇಶ್ವರಬೆಟ್ಟ, ಪಿ.ಜಿ.ಪಾಳ್ಯ, ಪಾಲರ್, ರಾಮಾಪುರ, ಹೂಗ್ಯ ಒಟ್ಟು 6 ವಲಯಗಳಲ್ಲಿ ಗಣತಿ ಕಾರ್ಯಕ್ಕಾಗಿ 450 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವ ಕಾರ್ಯಕ್ಕೆ ಅ.14ರಂದು ಡಿಎಫ್​​ವಿ ಏಡುಕೊಂಡಲು ನೇತೃತ್ವದಲ್ಲಿ ಚಾಲನೆ ಸಿಕ್ಕಿತ್ತು. 270 ಸಿಬ್ಬಂದಿಯನ್ನೊಳಗೊಂಡ ವಿವಿಧ ಕಡೆಗಳಲ್ಲಿ 300 ಕ್ಯಾಮೆರಾ ಅಳವಡಿಸಿ ಮೊದಲ ಹಂತದ ಗಣತಿ ಕಾರ್ಯ ಮುಕ್ತಾಯಗೊಂಡಿದೆ.

ಇದೀಗ 2ನೇ ಹಂತದ ಗಣತಿ ಕಾರ್ಯವನ್ನು ಮುಂದುವರೆಸಲಾಗಿದೆ. ಉಳಿದ 150 ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಿ ಬಳಿಕ ದತ್ತಾಂಶ ಶೇಖರಣೆ ಕಾರ್ಯ ನಡೆಯಲಿದೆ. ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ 3ನೇ ಹಂತದಲ್ಲಿ ಹುಲಿ ಹಾಗೂ ವನ್ಯಪ್ರಾಣಿಗಳ ಗಣತಿಯು ಸಹ ಜರುಗಲಿದೆ. ಕ್ಯಾಮೆರಾ ಸೇರಿದಂತೆ ಎಸ್​​ಡಿ ಕಾರ್ಡ್, ಲ್ಯಾಪ್‌ಟಾಪ್, ರಿಮೋಟ್ ಕಂಟ್ರೋಲ್ ಇತರೆ ಸಾಮಗ್ರಿಗಳನ್ನು ಬಳಕೆ ಮಾಡಿ ಗಣತಿ ಕಾರ್ಯ ಮಾಡಲಾಗುತ್ತಿದೆ.

ಉತ್ತಮ ಮಳೆಯಾಗಿರುವ ಹಿನ್ನೆಲೆ ಮೇವು ಸೇರಿದಂತೆ ನೂರಾರು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಹಾಗಾಗಿ, ಅಲ್ಲಲ್ಲಿ ಹುಲಿ ಸೇರಿದಂತೆ ವನ್ಯಪ್ರಾಣಿಗಳು ಓಡಾಡಿರುವ ಗುರುತುಗಳು ಪತ್ತೆಯಾಗಿವೆ. ಇದರಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿ ಸಿಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2018ರಲ್ಲಿ ಗಣತಿ ಕಾರ್ಯ :2018ರಲ್ಲಿ ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿಗಳ ಗಣತಿ ನಡೆಸಲಾಗಿತ್ತು. 350ಕ್ಕೂ ಹೆಚ್ಚು ಆನೆ, 25 ಹುಲಿ, 17 ಚಿರತೆಗಳಿಗೆ ವನ್ಯಜೀವಿಧಾಮ ಆವಾಸ ಸ್ಥಳವಾಗಿದೆ ಎಂದು ತಿಳಿಸಿತ್ತು. ಅಲ್ಲದೇ ಅಳಿವಿನಂಚಿನಲ್ಲಿರುವ ಹನಿಬಡ್ಜರ್, ಸಸ್ಯಹಾರಿ ಪ್ರಾಣಿಗಳಾದ ಜಿಂಕೆ, ಸಾರಂಗ, ಮೊಲ ಹಾಗೂ ಸಣ್ಣಪುಟ್ಟ ಇತರೆ ವನ್ಯಪ್ರಾಣಿಗಳು ಸಹ ಗಣತಿಯಲ್ಲಿ ಪತ್ತೆಯಾಗಿದ್ದವು.

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪ್ರಸ್ತುತ ನಡೆಯುತ್ತಿರುವ ವನ್ಯಜೀವಿ ಗಣತಿ ಕಾರ್ಯವು ಮುಂದಿನ ದಿನಗಳಲ್ಲಿ ವನ್ಯಜೀವಿಧಾಮವು ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಲು ನೆರವಾಗಲಿದೆ. ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿರಂಗನಬೆಟ್ಟ ಹಾಗೂ ಗಡಿಭಾಗದಲ್ಲಿರುವ ತಮಿಳುನಾಡಿನ ಸತ್ಯಮಂಗಲದಲ್ಲಿ ಹುಲಿ ಸಂರಕ್ಷಿತಾರಣ್ಯ ಪ್ರದೇಶವಿದೆ.

ಮಲೆ ಮಹದೇಶ್ವರಬೆಟ್ಟ ವನ್ಯಜೀವಿ ಧಾಮ ವಲಯವನ್ನು ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮಾಡಲು ಅರಣ್ಯ ಇಲಾಖೆ ಅಕಾರಿಗಳ ತಂಡ ಕಳೆದ ಎರಡು ತಿಂಗಳ ಹಿಂದಷ್ಟೆ ಸರ್ಕಾರಕ್ಕೆ ವರದಿ ನೀಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರದ ಹಂತದಲ್ಲಿರುವ ಪ್ರತಿಗೆ ಅಂತಿಮ ಸಹಿ, ಆದೇಶಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆ ಗಣತಿಯಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ಎಂದು ತಿಳಿಯುವುದು ಮೀಸಲು ಪ್ರದೇಶ ಘೋಷಿಸಲು ಸಹಕಾರಿಯಾಗಲಿದೆ.

ಇದನ್ನೂ ಓದಿ:3 ಟೈಗರ್ ರಿಸರ್ವ್ ಹೊಂದಿದ ದೇಶದ ಏಕೈಕ ಜಿಲ್ಲೆಯಾಗಲಿದೆ ಚಾಮರಾಜನಗರ

For All Latest Updates

TAGGED:

tiger census

ABOUT THE AUTHOR

...view details