ಕರ್ನಾಟಕ

karnataka

ETV Bharat / state

ಶಿವನಸಮುದ್ರ ಸಮೂಹ ದೇವಾಲಯದ ಹುಂಡಿಯಲ್ಲಿ 10.44 ಲಕ್ಷ ಸಂಗ್ರಹ - Shivana samudra temple

ಕೊರೊನಾ ಬಳಿಕ ಮೂರು ತಿಂಗಳ ಅವಧಿಯಲ್ಲಿ ವನಸಮುದ್ರ ಸಮೂಹ ದೇವಾಲಯಕ್ಕೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿದ್ದು, 10.44 ಲಕ್ಷ ರೂ. ಸಂಗ್ರಹವಾಗಿದೆ..

10-dot-44-lakh-collection-in-shivanasamudra-temple
ಶಿವನಸಮುದ್ರ ಸಮೂಹ ದೇವಾಲಯದ ಹುಂಡಿಯಲ್ಲಿ 10.44 ಲಕ್ಷ ಸಂಗ್ರಹ

By

Published : Jan 20, 2021, 10:15 PM IST

ಕೊಳ್ಳೇಗಾಲ (ಚಾಮರಾಜನಗರ) :ಇಲ್ಲಿನ ಶಿವನಸಮುದ್ರ ಸಮೂಹ ದೇವಾಲಯದ ಹುಂಡಿ ಹಣ ಬರೋಬ್ಬರಿ 10.44 ಲಕ್ಷ ನಗದು ಸಂಗ್ರಹವಾಗಿದೆ.

ತಾಲೂಕಿನ ಸತ್ತೇಗಾಲ ಸಮೀಪದ ಶಿವನಸಮುದ್ರ ಸಮೂಹ ದೇವಾಲಯಗಳಾದ ಆದಿಶಕ್ತಿ ಮಾರಮ್ಮ ದೇವಾಲಯ, ಪ್ರಸನ್ನಾ ಮೀನಾಕ್ಷಿ ರಂಗನಾಥಸ್ವಾಮಿ ದೇವಾಲಯ ಹಾಗೂ ಮಧ್ಯರಂಗನಾಥಸ್ವಾಮಿ ದೇವಾಲಯದ ಹುಂಡಿಗಳ ಎಣಿಕೆ ಮುಗಿದಿದ್ದು, ಕೊರೊನಾ ನಡುವೆಯೂ 3 ತಿಂಗಳಲ್ಲಿ 10,44,290 ರೂ. ಸಂಗ್ರಹವಾಗಿದೆ.

ಮಧ್ಯರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಂದೋಲೆ ನೇತೃತ್ವದಲ್ಲಿ ಎಣಿಕೆ ಕಾರ್ಯ ಜರುಗಿದೆ.

ಇದನ್ನೂ ಓದಿ:ದೇವದಾಸಿ ಪದ್ಧತಿ ಮುಂದುವರೆಸಿದರೆ ಕಾನೂನು ಕ್ರಮ: ಶಶಿಕಲಾ ವಿ. ಟೆಂಗಳಿ

ABOUT THE AUTHOR

...view details