ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಅತ್ತಿಮೊಗಂ, ಗಟ್ಟಪಲ್ಲಿ ಸುತ್ತ ಹತ್ತಾನೆಗಳು ಕಾಣಿಸಿಕೊಂಡಿವೆ.
ಬೇಸಿಗೆ ಆರಂಭಗೊಂಡು ಕಾಡಿನಲ್ಲೂ ನೀರಿಗೆ, ಮೇವಿಗೆ ಹಾಹಾಕಾರವೆದ್ದಿದೆ. ಸುಡು ಬಿಸಿಲಿಗೆ ಹಚ್ಚ ಹಸಿರಿನ ಗಿಡ-ಮರಗಳು ಒಣಗಿ ಹೋಗಿದ್ದು, ಕಾದ ಬಾಣಲೆಯಂತಾಗಿ ಅಂತರ್ಜಲ ಬತ್ತಿ ಪಾತಾಳಕ್ಕಿಳಿದಿದೆ. ಇದ್ದ ಕೆರೆ ಕುಂಟೆಗಳು ಕೂಡ ಬಿರುಕು ಬಿಟ್ಟು ಜೀವಜಲವೇ ಕಾಣದಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿ ಪ್ರತ್ಯಕ್ಷವಾದ ಹತ್ತಾನೆಗಳು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಅತ್ತಿಮೊಗಂ, ಗಟ್ಟಪಲ್ಲಿ ಸುತ್ತ ಹತ್ತಾನೆಗಳು ಕಾಣಿಸಿಕೊಂಡಿವೆ. ಚುನಾವಣೆಯ ಗುಂಗಿನಲ್ಲಿದ್ದ ಗ್ರಾಮೀಣ ಜನರಿಗೆ ಗಜಪಡೆ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಇನ್ನು ಸೂಳಗಿರಿ ಅರಣ್ಯ ಸಿಬ್ಬಂದಿ ಚುನಾವಣಾ ಕಾವಿನಿಂದ ಹೊರಗೆ ಬರುವ ಮುನ್ನವೇ ಆನೆ ಪಡೆಯ ಪ್ರತ್ಯಕ್ಷ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಒಟ್ಟಾರೆ ನಾಡಿನಲ್ಲಿ ನಡೆದ ಚುನಾವಣಾ ಬಿಸಿ ಮುಗಿಸಿಕೊಂಡ ಅರಣ್ಯ ಸಿಬ್ಬಂದಿಗೆ ಗಜ ಪಡೆ ಆಗಮನದಿಂದ ಮತ್ತೆ ತಲೆಬಿಸಿ ಆಗಿದೆ.