ಬೆಂಗಳೂರು: ನೀರು ಕುಡಿಸುವ ನೆಪದಲ್ಲಿ ಅಂಧ ದಂಪತಿಯ 8 ತಿಂಗಳ ಗಂಡು ಮಗುವನ್ನ ಕಿಡ್ನಾಪ್ ಮಾಡಿರೋ ಘಟನೆ ಮೆಜೆಸ್ಟಿಕ್ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನೀರು ಕುಡಿಸುವ ನೆಪದಲ್ಲಿ ಅಂಧ ದಂಪತಿಯ ಗಂಡು ಮಗು ಕಿಡ್ನ್ಯಾಪ್.. ಮಕ್ಕಳ ಕಳ್ಳಿ ಪತ್ತೆಗೆ ಖಾಕಿ ಬಲೆ - undefined
ಮೆಜೆಸ್ಟಿಜಕ್ನಲ್ಲಿ ನೀರು ಕುಡಿಸುವ ನೆಪದಲ್ಲಿ ಅಂಧ ದಂಪತಿಯ 8 ತಿಂಗಳ ಗಂಡು ಮಗು ಕಿಡ್ನಾಪ್ ಮಾಡಿ ಪರಾರಿಯಾದ ಅಪರಿಚಿತ ಮಹಿಳೆ. ಮಗು ಇಲ್ಲದೇ ಕಣ್ಣೀರು ಹಾಕ್ತಿರುವ ರಾಯಚೂರು ಮೂಲದ ಅಂಧ ದಂಪತಿ.
ಸಂಬಂಧಿಕರ ಮನೆಗೆ ತೆರಳಲು ಕಳೆದ ಶನಿವಾರ ಬೆಳಿಗ್ಗೆ 7ಗಂಟೆ ಸುಮಾರಿಗೆ ಮೆಜೆಸ್ಟಿಕ್ಗೆ ಬಂದಿಳಿದಿದ್ದ ರಾಯಚೂರು ಮೂಲದ ಬಸವರಾಜ್ ಹಾಗೂ ಚಿನ್ನು ದಂಪತಿ, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಮಗು ಸಾಗರ್ ಅಳತೊಡಗಿದೆ. ಮಗುವಿಗೆ ನೀರು ಕುಡಿಸುತ್ತಿದ್ದಾಗ ಬಂದ ಅಪರಿಚಿತ ಮಹಿಳೆಯೋರ್ವಳು ತಾನು ನೀರು ಕುಡಿಸಲು ಸಹಾಯ ಮಾಡುವುದಾಗಿ ಮಗುವನ್ನ ಪಡೆದಿದ್ದಾಳೆ. ಆದರೆ, ವಾಪಸ್ ನೀಡದೆ ಕಿಡ್ನಾಪ್ ಮಾಡಿ ಪರಾರಿಯಾಗಿದ್ದಾಳೆ.
ಸದ್ಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿದ್ದು, ಮಗು ಮತ್ತು ಕಿಡ್ನಾಪರ್ ಮಹಿಳೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.