ಬೀದರ್:ದೆಹಲಿಯ ನಿಜಾಮುದ್ದೀನ್ ಜಮಾತ್ ಗೆ ಹೋಗಿದ್ದ ವ್ಯಕ್ತಿ ಕೋವಿಡ್ -19 ಸೋಂಕು ಬಾಧಿತನಾಗಿ ಬಂದಿದ್ದ. ಪರೀಕ್ಷೆ ಬಳಿಕ ಆತನನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಗುಣಮುಖನಾಗಿ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಿದ್ದ ಈತ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾನೆಂದು ಪ್ರಕರಣ ದಾಖಲಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘನೆ: ಬೀದರ್ನಲ್ಲಿ ಕೊರೊನಾದಿಂದ ಗುಣಮುಖನಾದ ವ್ಯಕ್ತಿ ವಿರುದ್ಧ ಕೇಸ್ - Nizamuddin Jamaat of Delhi
ನಿಜಾಮುದ್ದೀನ್ ಜಮಾತ್ ಗೆ ಹೋಗಿ ಕೋವಿಡ್ -19 ಸೋಂಕು ಬಾಧಿತನಾಗಿದ್ದ ವ್ಯಕ್ತಿಯನ್ನು ಬ್ರಿಮ್ಸ್ ಗೆ ದಾಖಲಿಸಲಾಗಿತ್ತು. ಸದ್ಯ ಗುಣಮುಖನಾಗಿ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಿದ್ದ ಈತ ಕ್ವಾರಂಟೈನ್ ನಿಯಮ ಉಲ್ಲಂಘಿಸಿರುವ ಆರೋಪದಡಿ ಪ್ರಕರಣ ದಾಖಲಾಗಿದೆ .
ಕ್ವಾರಂಟೈನ್ ನಿಯಮ ಉಲ್ಲಂಘನೆ: ಕೊರೊನಾ ಸೋಂಕು ಗುಣಮುಖನ ಮೇಲೆ ಕೇಸ್...!
ನಗರದ ಕುಸುಮಗಲ್ಲಿ ನಿವಾಸಿ ಶೋಯೊಬೊದ್ದಿನ್ ಎಂಬಾತ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರಿಗೆ ಜಿಲ್ಲಾಡಳಿತ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ತಾಕೀತು ಮಾಡಿತ್ತು. ಆದ್ರೆ ಇಂದು ಬೆಳಗ್ಗೆ ರಂಗಮಂದಿರದ ಹತ್ತಿರ ತಮ್ಮ ಅಣ್ಣನ ಮನೆಯ ಸುತ್ತ ಸುತ್ತಾಡಿರುವುದನ್ನು ಗಸ್ತಿನಲ್ಲಿರುವ ಪೊಲೀಸರು ಗಮನಿಸಿದ್ದಾರೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕೆ ಕಲಂ 269 ಹಾಗೂ 271 ರನ್ವಯ ನ್ಯೂ ಟೌನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.