ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು,108 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೂ 6,952 ಜನರ ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿದ್ದು,ವರದಿ ಬರುವುದು ಬಾಕಿಯಿದೆ.
ಬೀದರ್ನಲ್ಲಿ ಒಟ್ಟು 108 ಮಂದಿಗೆ ಕೊರೊನಾ ಸೋಂಕು.. 6,952 ವರದಿ ಬಾಕಿ - ಬೀದರ್ ಕೊರೊನಾ ಕೇಸ್
ಗಡಿ ಜಿಲ್ಲೆ ಬೀದರ್ನಲ್ಲಿ ಒಟ್ಟು 108 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇನ್ನೂ 6,952 ಜನರ ವರದಿ ಬರುವುದು ಬಾಕಿಯಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಬೀದರ್ನಲ್ಲಿ ಒಟ್ಟು 108 ಮಂದಿಗೆ ಕೊರೊನಾ ಸೋಂಕು..6,952 ವರದಿ ಬಾಕಿ
ಕಳೆದೆರಡು ತಿಂಗಳಿಂದ ಜಿಲ್ಲೆಯಲ್ಲಿ ಸೊಂಕು ಹತೋಟಿಗೆ ಬಂದಿತ್ತು ಆದರೆ, ಮಹಾರಾಷ್ಟ್ರದಿಂದ ವಾಪಸ್ ಬಂದ ಕೆಲವರಿಂದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ 108 ಜನರಿಗೆ ಸೋಂಕು ತಗುಲಿದ್ದು, ಮೂವರು ಸಾವಿಗಿಡಾಗಿದ್ದಾರೆ. 24 ಜನರು ಗುಣಮುಖರಾಗಿದ್ದು, 81 ಜನರಿಗೆ ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.