ಕರ್ನಾಟಕ

karnataka

ETV Bharat / state

ಈಗಿನ ಕಾಂಗ್ರೆಸ್ ಅಧ್ಯಕ್ಷರ ಮೂಲ ಯಾವುದೆಂದು ಕೇಳಬೇಕಾಗುತ್ತೆ: ಆರ್. ಅಶೋಕ್ ತಿರುಗೇಟು - Siddaramaiah has no moral right to criticize the RSS says Minister R Ashok

ಆರ್​​​ಎಸ್ಎಸ್ ಕುರಿತು ಟೀಕೆ ಮಾಡುವ ನೈತಿಕ ಹಕ್ಕು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​​​ಗೆ ಇಲ್ಲ. ಆರ್​ಎಸ್​ಎಸ್ ನಮಗೆ ತಾಯಿ ಸ್ಥಾನದಲ್ಲಿದೆ. ಆರ್​​​ ಎಸ್ ಎಸ್​ನ್ನು ಟೀಕಿಸಿದರೆ ನನ್ನನ್ನು ಟೀಕಿಸಿದಂತೆ, ನನ್ನ ಅಸ್ತಿತ್ವವನ್ನು ಪ್ರಶ್ನಿಸಿದಂತೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

siddaramaiah-has-no-moral-right-to-criticize-the-rss-says-minister-r-ashok
ಈಗಿನ ಕಾಂಗ್ರೆಸ್ ಅಧ್ಯಕ್ಷರ ಮೂಲ ಯಾವುದು ಎಂದು ಕೇಳಬೇಕಾಗುತ್ತದೆ : ಆರ್. ಅಶೋಕ್

By

Published : May 28, 2022, 4:48 PM IST

ಬೀದರ್ :RSSಕುರಿತು ಟೀಕೆ ಮಾಡುವ ನೈತಿಕ ಹಕ್ಕು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​​​​​ಗೆ ಇಲ್ಲ ಎಂದು ಕಂದಾಯ ಸಚಿವರು ಆರ್.ಅಶೋಕ್ ಹೇಳಿದ್ದಾರೆ. ಜಿಲ್ಲೆಯ ಔರಾದ ತಾಲೂಕಿನ ವಡಗಾಂವ ಗ್ರಾಮದಲ್ಲಿ’ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್​​ಎಸ್​ಎಸ್​​ ನಮಗೆ ತಾಯಿ ಸ್ಥಾನದಲ್ಲಿದೆ. ಆರ್​​ಎಸ್​ಎಸ್​ ಟೀಕಿಸಿದರೆ ನನ್ನನ್ನು ಟೀಕಿಸಿದಂತೆ, ನನ್ನ ಅಸ್ತಿತ್ವವನ್ನು ಪ್ರಶ್ನಿಸಿದಂತೆ ಎಂದು ಹೇಳಿದ್ದಾರೆ.

ಆರ್​ಎಸ್​ಎಸ್ ಮೂಲ ಪ್ರಶ್ನಿಸಿದರೆ, ಈಗಿನ ಕಾಂಗ್ರೆಸ್ ಅಧ್ಯಕ್ಷರ ಮೂಲ ಯಾವುದು ಎಂದು ಕೇಳಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಈ ರೀತಿ ಟೀಕೆ ಮಾಡಿದರೆ ಸಿದ್ದರಾಮಯ್ಯ ಅಸ್ಥಿತ್ವವನ್ನು ಪ್ರಶ್ನಿಸುವ ಸ್ಥಿತಿ ಬರುತ್ತದೆ. ಇದು ಹೀಗೆ ಮುಂದುವರೆದರೆ ಕಾಂಗ್ರೆಸ್ ಮೂಲ ಕೆಣಕಬೇಕಾಗುತ್ತದೆ. ಕಾಂಗ್ರೆಸ್​ನ ಮೊದಲ ಅಧ್ಯಕ್ಷರ ಮೂಲ ಯಾವುದು, ಈಗಿನ ಕಾಂಗ್ರೆಸ್ ಅಧ್ಯಕ್ಷರ ಮೂಲ ಯಾವುದು ಎಂದು ಕೇಳಬೇಕಾಗುತ್ತದೆ. ಕಾಂಗ್ರೆಸ್ ಮೂಲ ಇಟಲಿಯಲ್ಲಿದೆ, ಇಂಗ್ಲೆಂಡಿನಲ್ಲಿದೆ. ನಮ್ಮ ಅಸ್ಥಿತ್ವವನ್ನು ಪ್ರಶ್ನಿಸೋಕೆ ಬರಬೇಡಿ. ಕಾಂಗ್ರೆಸ್ ನ ಮೂಲವನ್ನು ಕೆದಕಿದರೆ ಒಂದು ವೋಟೂ ಸಿಗಲ್ಲ. ಈ ಕೂಡಲೇ ಸಿದ್ದರಾಮಯ್ಯ ರಾಜ್ಯದ ಕ್ಷಮೆ ಕೇಳಬೇಕು, ಆರ್​​ಎಸ್​ಎಸ್​ ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಓದಿ :ಗಾಂಧೀಜಿ ಅಹಿಂಸಾ ಚಳವಳಿ ನಿಂತಾಗ ಬೇಸರಗೊಂಡು ಕಾಂಗ್ರೆಸ್ ತ್ಯಜಿಸಿದ್ರಂತೆ ಹೆಡ್ಗೇವಾರ್.. ರೋಹಿತ್ ಚಕ್ರತೀರ್ಥ ಹೇಳಿಕೆ..

ABOUT THE AUTHOR

...view details