ಬೀದರ್:ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ಹೊರವಲಯದ ಬಸವಕಲ್ಯಾಣ-ಭಾಲ್ಕಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬಳಸಿದ ಪಿಪಿಇ ಕಿಟ್ ಪತ್ತೆಯಾಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ಪಕ್ಕದಲ್ಲಿ ಪತ್ತೆಯಾದ ಪಿಪಿಇ ಕಿಟ್: ತೆಲಂಗಾಣ ಆ್ಯಂಬುಲೆನ್ಸ್ ಸಿಬ್ಬಂದಿ ಮೇಲೆ ಸಂಶಯ
ತಡರಾತ್ರಿ ಕೊರೊನಾದಿಂದ ತೆಲಂಗಾಣದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬನನ್ನು ಆತನ ಸ್ವಗ್ರಾಮ ರಾಚಪ್ಪ ಗೌಂಡಗಾಂವ್ಗೆ ಆ್ಯಂಬುಲೆನ್ಸ್ನಲ್ಲಿ ಸಾಗಿಸಲಾಗಿತ್ತು. ಈ ವೇಳೆ ಪಿಪಿಇ ಕಿಟ್ ಧರಿಸಿದ್ದ ಆ್ಯಂಬುಲೆನ್ಸ್ ಸಿಬ್ಬಂದಿ ಮೃತದೇಹ ಬಿಟ್ಟು ಹೋಗುವಾಗ ಪಿಪಿಇ ಕಿಟ್ ಬಿಸಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಡರಾತ್ರಿ ಕೊರೊನಾದಿಂದ ತೆಲಂಗಾಣದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬನನ್ನು ಆತನ ಸ್ವಗ್ರಾಮ ರಾಚಪ್ಪ ಗೌಂಡಗಾಂವ್ಗೆ ಆ್ಯಂಬುಲೆನ್ಸ್ನಲ್ಲಿ ಸಾಗಿಸಲಾಗಿತ್ತು. ಈ ವೇಳೆ ಪಿಪಿಇ ಕಿಟ್ ಧರಿಸಿದ್ದ ಆ್ಯಂಬುಲೆನ್ಸ್ ಸಿಬ್ಬಂದಿಯು ಮೃತದೇಹವನ್ನು ಬಿಟ್ಟು ಹೋಗುವಾಗ ಪಿಪಿಇ ಕಿಟ್ ಬಿಸಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಿಪಿಇ ಎಸೆದು ಹೋಗಿರುವುದನ್ನು ಕಂಡ ರೈತನೊಬ್ಬ ವರವಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
ನಂತರ ಸ್ಥಳಕ್ಕಾಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ಗೆ ವೈಜ್ಞಾನಿಕವಾಗಿ ಬೆಂಕಿ ಹಚ್ಚುವ ಮೂಲಕ ಜನರಲ್ಲಿ ಆವರಿಸಿದ್ದ ಆತಂಕವನ್ನು ದೂರ ಮಾಡಿದ್ದಾರೆ.