ಬೀದರ್:ಕೋವಿಡ್ - 19 ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಖಾಸಗಿ ಆಸ್ಪತ್ರೆಗಳ ಒಪಿಡಿ ಆರಂಭಿಸಿ ವರದಿ ನೀಡುವಲ್ಲಿ ಹಿಂದೇಟು ಹಾಕಿದ ಜಿಲ್ಲೆಯ 7 ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀಗ ಜಡಿದು ಆದೇಶ ಹೊರಡಿಸಿದೆ.
ಆದೇಶ ಉಲ್ಲಂಘನೆ: 7 ಆಸ್ಪತ್ರೆಗಳಿಗೆ ಬೀಗ ಜಡಿದ ಆರೋಗ್ಯ ಇಲಾಖೆ..!
ಸರ್ಕಾರದ ಆದೇಶ ಪಾಲಿಸದ ಹಿನ್ನೆಲೆ ಬೀದರ್ ಜಿಲ್ಲೆಯ 7 ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀಗ ಜಡಿದಿದೆ.
ಬೀದರ್ ಜಿಲ್ಲೆಯ 7 ಆಸ್ಪತ್ರೆಗಳಿಗೆ ಬೀಗ
ಈ ಕುರಿತು ಡಿಹೆಚ್ಒ ಡಾ.ವಿ.ಜಿ ರೆಡ್ಡಿ ಅವರು ಹೊರಡಿಸಿದ ಪ್ರಕಟಣೆಯಲ್ಲಿ ಕೊರೊನಾ ವಿರುದ್ಧದ ಹೊರಾಟದಲ್ಲಿ ಸ್ಪಂದಿಸುವಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿತ್ತು. ಈ ಪೈಕಿ ಏಳು ಆಸ್ಪತ್ರೆಗಳು ನಿರ್ಲಕ್ಷ್ಯ ವಹಿಸಿವೆ. ಹೀಗಾಗಿ ಸರ್ಕಾರದ ನಿಯಮಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಆಸ್ಪತ್ರೆಗಳನ್ನು ಮುಚ್ಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಬಾಗಿಲು ಮುಚ್ಚಿಕೊಂಡ ಆಸ್ಪತ್ರೆಗಳು:
- ಡಾ. ವೀರಪ್ಪ ಕೋರಿ, ಬಸವ ಕ್ಲಿನಿಕ್ ಮನ್ನಾಖೇಳ್ಳಿ ಹುಮನಾಬಾದ್ ತಾಲೂಕು.
- ಡಾ. ಗೌರಮ್ಮ, ವೀರಭದ್ರೇಶ್ವರ ಕನ್ಸಲ್ಟೇಶನ್ ಸೆಂಟರ್ ಬಸವೇಶ್ವರ ನಗರ ಹುಮನಾಬಾದ್.
- ಡಾ. ಪೂಜಾ ಪಾಟೀಲ್, ಸರಸ್ವತಿ ಕ್ಲಿನಿಕ್ ಜನತಾ ಕಾಲೋನಿ ಔರಾದ್.
- ಡಾ. ಬಾಬುರಾವ್ ಪಾಟೀಲ್, ವೇಂಕಟೇಶ್ವರ ಕ್ಲಿನಿಕ್ ಸುಭಾಷ್ ಚೌಕ್ ಭಾಲ್ಕಿ.
- ಡಾ. ವಿಜಯಕುಮಾರ್ ಬೊರಾಳೆ, ಶ್ರೀ ಸಾಯಿ ಸಂಜೀವಿನಿ ಕ್ಲಿನಿಕ್ ಬಸವೇಶ್ವರ ಚೌಕ್ ಭಾಲ್ಕಿ.
- ಡಾ. ಡಿ.ವಿ. ರೆಡ್ಡಿ, ವೆಂಕಟ ಕ್ಲಿನಿಕ್ ಬಸವಕಲ್ಯಾಣ.
- ಮೊರೆ ಆಸ್ಪತ್ರೆ ಬಸವಕಲ್ಯಾಣ.