ಬೀದರ್: ಬಿಜೆಪಿ ಸಂಸದ ಭಗವಂತ ಖೂಬಾ ಅವರು ವೈದ್ಯರ ಬಗ್ಗೆ ಕೀಳಾಗಿ ಮಾತನಾಡಿದ್ದು, ಈ ಕುರಿತು ಅವರು ಕ್ಷಮೆ ಕೇಳಬೇಕು ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್ ಆಗ್ರಹಿಸಿದ್ದಾರೆ.
ಸಂಸದ ಭಗವಂತ ಖೂಬಾ ವೈದ್ಯರ ಕ್ಷಮೆ ಕೋರಬೇಕು: ಸಚಿವ ರಹೀಂ ಖಾನ್ - kannadanews
ವೈದ್ಯರ ಬಗ್ಗೆ ಕೀಳಾಗಿ ಮಾತನಾಡಿರುವ ಬಿಜೆಪಿ ಸಂಸದ ಭಗವಂತ ಖೂಬಾ ವೈದ್ಯರಲ್ಲಿ ಕ್ಷಮೆ ಕೇಳಬೇಕು ಎಂದು ಸಚಿವ ರಹೀಂ ಖಾನ್ ಆಗ್ರಹಿಸಿದ್ದಾರೆ.
ಸಂಸದ ಭಗವಂತ ಖೂಬಾ ಅವರು ತಾನು ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದೀನಿ ಎಂಬ ಭರದಲ್ಲಿ ನಾಲಿಗೆ ಹರಿಬಿಟ್ಟು ಯಾರಿಗೆ ಏನ್ ಬೇಕಾದ್ರು ಮಾತಾಡಬಹುದು ಅಂತ ಈ ರೀತಿ ಮಾತಾಡ್ತಿದ್ದಾರೆ ಎಂದು ರಹೀಂ ಖಾನ್ ಹೇಳಿದ್ರು. ಬ್ರಿಮ್ಸ್ ಆಸ್ಪತ್ರೆ ಕಟ್ಟಡದ ಮೇಲ್ಛಾವಣಿ ಕುಸಿತ ಸ್ಥಳ ಪರಿಶೀಲನೆ ನಂತರ ಮಾತನಾಡಿದ ಅವರು, ಕಳೆದ ವಾರ ಸಂಸದ ಭಗವಂತ ಖೂಬಾ ಅವರು ಆಸ್ಪತ್ರೆಗೆ ಭೇಟಿ ನೀಡಿದಾಗ ವೈದ್ಯರನ್ನು ನಾಯಿಗೆ ಹೋಲಿಸಿ ಮಾತನಾಡಿರುವುದನ್ನು ಉಲ್ಲೇಖಿಸಿ ಹೀಗೆ ಮಾತಾಡುವುದು ತಪ್ಪು ಎಂದ್ರು.
ನಾಲಿಗೆ ಇದೆ ಅಂತ ಯಾರಿಗೆ ಏನ್ ಬೇಕಾದ್ರು ಮಾತಾಡಬಾರದು. ಜವಾಬ್ದಾರಿಯಿಂದ ಮಾತಡಬೇಕು. ಹೀಗಾಗಿ ಭಗವಂತ ಖೂಬಾ ಅವರು ವೈದ್ಯರ ಬಳಿ ಕ್ಷಮೆ ಕೋರಬೇಕು ಎಂದು ಖಾನ್ ಆಗ್ರಹಿಸಿದರು.