ಬೀದರ್: ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಹೊಸ ನಾಮಕರಣವಾಗಿದೆ. ಕಲ್ಯಾಣ ಕರ್ನಾಟಕ ಈಗ ಹೊಸ ಹೆಸರು ಎಂದು ರಾಜ್ಯ ಸಚಿವ ಸಂಪುಟ ಅಂಗಿಕರಿಸಿದ್ದು, ಇದು ಐತಿಹಾಸಿಕ ತಿರ್ಮಾನವಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಹೈದರಾಬಾದ್ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ' ಎಂದು ನಾಮಕರಣ: ಸಚಿವ ಚವ್ಹಾಣ್ ಘೋಷಣೆ
ಹೈದ್ರಾಬಾದ್ ನಿಜಾಮರ ಕಪಿಮುಷ್ಠಿಯಲ್ಲಿ ರಕ್ತ ಚರಿತ್ರೆಯಿಂದ ಬಳಲಿದ ಈ ಭಾಗಕ್ಕೆ ಹೈದ್ರಾಬಾದ್ ಕರ್ನಾಟಕ ಎಂಬ ಹೆಸರು ಸರಿಯಾಗಿರಲಿಲ್ಲ. ನೂರಾರು ಜನರ ಹತ್ಯಾಕಾಂಡ ನಡೆದಿರುವುದು ದುರಂತವಾಗಿದ್ದ ಹಿನ್ನೆಲೆಯಲ್ಲಿ ಹಲವಾರು ಬಾರಿ ಮೈತ್ರಿ ಸರ್ಕಾರದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನೂ ಮನವಿ ಮಾಡಿದ್ರು ಪ್ರಯೋಜನವಾಗಿರಲಿಲ್ಲ. ಬಿಎಸ್ವೈ ಸರ್ಕಾರದಲ್ಲಿ ಅದು ಜಾರಿಯಾಗಿದೆ ಎಂದು ಸಚಿವ ಪ್ರಭು ಚವ್ಹಾಣ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈದ್ರಾಬಾದ್ ನಿಜಾಮರ ಕಪಿಮುಷ್ಠಿಯಲ್ಲಿ ರಕ್ತ ಚರಿತ್ರೆಯಿಂದ ಬಳಲಿದ ಈ ಭಾಗಕ್ಕೆ ಹೈದರಾಬಾದ್ ಕರ್ನಾಟಕ ಎಂಬ ಹೆಸರು ಸರಿಯಾಗಿರಲಿಲ್ಲ. ನೂರಾರು ಜನರ ಹತ್ಯಾಕಾಂಡ ನಡೆದಿರುವುದು ದುರಂತವಾಗಿದ್ದ ಹಿನ್ನೆಲೆಯಲ್ಲಿ ಹಲವಾರು ಬಾರಿ ಮೈತ್ರಿ ಸರ್ಕಾರದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನೂ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ.
ಆದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಇವತ್ತು ನಡೆದ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಹೆಸರು ನಾಮಕರಣ ಮಾಡಬೇಕು ಎಂದು ನಾನು ಪ್ರಸ್ತಾಪಿಸಿದಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಸಂಪುಟ ಸದಸ್ಯರೆಲ್ಲರೂ ಸರ್ವಾನುಮತದಿಂದ ಅನುಮೊದನೆ ನೀಡಿದ್ದಾರೆ. ಎಲ್ಲರಿಗೂ ಅಭಿನಂದನೆ ಎಂದರು.