ಬೀದರ್: ನವಜಾತ ಹೆಣ್ಣು ಶಿಶುವೊಂದನ್ನು ಚೀಲದಲ್ಲಿ ಸುತ್ತಿ ರಸ್ತೆ ಪಕ್ಕದಲ್ಲಿ ಬಿಸಾಡಿ ಪರಾರಿಯಾಗಿರುವ ಘಟನೆ ಔರಾದ್ ತಾಲೂಕಿನಲ್ಲಿ ನಡೆದಿದೆ.
ಸುರಿಯುವ ಮಳೆಯಲ್ಲಿ ರಸ್ತೆ ಪಕ್ಕ ನವಜಾತ ಶಿಶು ಎಸೆದ ಪಾಪಿಗಳು - ಔರಾದ್ ನವಜಾತ ಶಿಶು ಪತ್ತೆ
ಸುರಿಯುತ್ತಿದ್ದ ಮಳೆಯಲ್ಲಿ ನವಜಾತ ಹೆಣ್ಣು ಶಿಶುವೊಂದನ್ನು ಗೋಣಿ ಚೀಲದಲ್ಲಿ ಸುತ್ತಿ ಪಾಪಿಗಳು ಎಸೆದು ಹೋಗಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡದಿದೆ.
ನವಜಾತ ಶಿಶು ಪತ್ತೆ
ಜಿಲ್ಲೆಯ ಔರಾದ್ ತಾಲೂಕಿನ ಲಿಂಗಿ-ಸಾವರಗಾಂವ್ ಗ್ರಾಮದ ನಡುವಿನ ರಸ್ತೆ ಪಕ್ಕದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಮೈ ಕೊರೆಯುವ ಚಳಿಯ ನಡುವೆ ಮಳೆಯಲ್ಲಿ ಗೊಣಿ ಚೀಲದಲ್ಲಿ ಸುತ್ತಿದ ಮಗುವಿನ ಚೀರಾಟ ಕಂಡು ಸ್ಥಳೀಯರು ಹೊಕ್ರಾಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಮಗು ತೀವ್ರ ಅಸ್ಪಸ್ಥವಾಗಿದ್ದನ್ನು ಕಂಡು ಔರಾದ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.