ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ಬಾ ಬಾರೋ ಮಳೆರಾಯ ಎಂದು ಅನ್ನದಾತರಿಂದ 7 ದಿನ ಭಜನೆ! - ಮುಂಗಾರು

ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದ್ರು ಬಾರದ ಮಳೆಯಿಂದಾಗಿ ಕಂಗ್ಗೆಟ್ಟಿರುವ ಅನ್ನದಾತರು ದೇವರ ಮೊರೆ ಹೋಗಿದ್ದು ಸತತ ಏಳು ದಿನ ಭಜನೆ ಮಾಡಿ ವರುಣನ ಮೊರೆ ಇಡುತ್ತಿದ್ದಾರೆ.

ಅನ್ನದಾತರಿಂದ 7 ದಿನ ಭಜನೆ

By

Published : Jul 16, 2019, 1:29 PM IST

ಬೀದರ್: ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದ್ರು ಬಾರದ ಮಳೆಯಿಂದಾಗಿ ಕಂಗ್ಗೆಟ್ಟಿರುವ ಅನ್ನದಾತರು ದೇವರ ಮೊರೆ ಹೋಗಿದ್ದು ಸತತ ಏಳು ದಿನ ಭಜನೆ ಮಾಡಿ ವರುಣನ ಮೊರೆ ಇಡುತ್ತಿದ್ದಾರೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದಲ್ಲಿ ಗ್ರಾಮ ದೇವತೆ,ಆಂಜನೇಯನ ದೇವಸ್ಥಾನದಲ್ಲಿ ಸಪ್ತಾಹ ಭಜನಾ ನಡೆಸಲಾಗಿದೆ. ಅಲ್ಲದೆ ದೇವರ ಭಾವಚಿತ್ರದ ಮೆರವಣಿಗೆ ನಡೆಸಿ ಊರಿನ ಮಹಿಳೆಯರು, ಮಕ್ಕಳು ಭಜನೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.

ಅನ್ನದಾತರಿಂದ 7 ದಿನ ಭಜನೆ
ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆದು ನೆಲಕಚ್ಚುತ್ತಿದ್ದು, ಸತತ ನಾಲ್ಕು ವರ್ಷಗಳಿಂದ ಭಯಂಕರ ಬರಗಾಲ ಎದುರಿಸಿದ ರೈತರು ಈ ಬಾರಿಯಾದ್ರು ಸಕಾಲಕ್ಕೆ ಮಳೆಯಾದ್ರೆ ಬದುಕು ಬಂಗಾರ ಆಗುತ್ತೆ ಅಂತ ಕನಸು ಕಟ್ಟಿಕೊಂಡಿದ್ದರು. ಆದರೆ ದುರದೃಷ್ಟವೆಂಬತೆ ಮಳೆರಾಯ ಕೈ ಕೊಟ್ಟಿದ್ದು ಮುಂದೇನು ಎಂಬ ಯೋಚನೆಯಲ್ಲಿ ಅನ್ನದಾತರು ದಿನ ದೂಡುವಂತಾಗಿದೆ.

ABOUT THE AUTHOR

...view details