ಬೀದರ್: ಜಿಲ್ಲೆಯಲ್ಲಿ ಇಂದು ಒಂದೇ ದಿನ 120 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೇ ಹೊಸದಾಗಿ 30 ಮಂದಿಗೆ ಕೊರೊನಾ ಸೋಂಕು ತಗುಲಿದ್ದು. ಒಬ್ಬರು ಸಾವನ್ನಪ್ಪಿದ್ದಾರೆ.
ಬೀದರ್: 30 ಜನರಿಗೆ ಕೊರೊನಾ, 120 ಜನ ಸೋಂಕಿತರು ಗುಣಮುಖ...! - Bidar corona news
ಜಿಲ್ಲೆಯಲ್ಲಿ ಇಂದು ಹೊಸದಾಗಿ 30 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದೆ.
Bidar
ಜಿಲ್ಲೆಯ ಔರಾದ್-07, ಬಸವಕಲ್ಯಾಣ- 03, ಭಾಲ್ಕಿ- 09, ಬೀದರ್- 07, ಹುಮನಾಬಾದ್- 03 ಹಾಗೂ ಅನ್ಯರಾಜ್ಯದಿಂದ ಬಂದ ಒಬ್ಬರಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4535 ಕ್ಕೆ ಏರಿಕೆಯಾಗಿದ್ದು, 3839 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 134 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ 440 ಜನರ ಗಂಟಲು ದ್ರವ ಮಾದರಿ ಪರಿಕ್ಷಾ ವರದಿ ಬರೋದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.