ಕರ್ನಾಟಕ

karnataka

ETV Bharat / state

ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ಯುವಕ ಸಾವು.. - ಬಳ್ಳಾರಿ ಸುದ್ದಿ

ಸ್ವಾತಂತ್ರ್ಯ ದಿನಾಚರಣೆ ದಿನ ಕಾಲೇಜು ರಜೆ ಇದ್ದ ಕಾರಣ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಕಾಲುಜಾರಿ ಬಿದ್ದ ಯುವಕ; ನೀರುಪಾಲು

By

Published : Aug 16, 2019, 10:41 PM IST

ಬಳ್ಳಾರಿ: ಸ್ವಾತಂತ್ರ್ಯ ದಿನಾಚರಣೆ ದಿನ ಕಾಲೇಜು ರಜೆ ಇದ್ದ ಕಾರಣ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಕಾಲುಜಾರಿ ಬಿದ್ದ ಯುವಕ ನೀರುಪಾಲು..

ನಗರದ ಹೊರವಲಯದ ಸಂಜೀವರಾಯನ ಕೋಟೆಯ ಹತ್ತಿರದ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಸುನೀಲ್ (18ವರ್ಷ)ಯುವಕ ನೀರು ಪಾಲಾಗಿದ್ದಾನೆ. ನಗರದ ಹೊರವಲಯದ ಸಂಜೀವರಾಯ ಕೋಟೆಯ ಯುವಕ ಇತ್ತೀಚಿಗೆ ಕುಡುತಿನಿ ಐಟಿಐ ಕಾಲೇಜ್ ಪ್ರವೇಶ ಪಡೆದಿದ್ದನೆಂದು ತಿಳಿದು ಬಂದಿದೆ.

ಅಲ್ಲಿಯ ಬಟ್ಟೆ ತೊಳೆಯುತ್ತಿದ್ದ ಜನರು ಯುವಕ ನೀರಿನಲ್ಲಿ ಮುಳುಗುತ್ತಿದ್ದನ್ನು ವೀಕ್ಷಣೆ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಘಟನೆಯ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details