ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಹಳ್ಳ ಹಿಡಿದ ನೀರಾವರಿ ಯೋಜನೆ: ಜನಪ್ರತಿನಿಧಿಗಳ ನಿರ್ಲಕ್ಷ್ಯ ಆರೋಪ

ಬಳ್ಳಾರಿ ಜಿಲ್ಲೆಯ ವೈ.ಕಗ್ಗಲ್ ಏತ ನೀರಾವರಿ ಯೋಜನೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಹಳ್ಳ ಹಿಡಿದು ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ds
ಬಳ್ಳಾರಿಯಲ್ಲಿ ಹಳ್ಳ ಹಿಡಿದ ನೀರಾವರಿ ಯೋಜನೆ

By

Published : Nov 21, 2020, 12:01 PM IST

ಬಳ್ಳಾರಿ: ತಾಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ಕೈಗೆತ್ತಿಕೊಂಡಿದ್ದ ಏತ- ನೀರಾವರಿ ಯೋಜನೆಗೆ ಸ್ಥಳೀಯ ಜನಪ್ರತಿನಿಧಿಗಳೇ ಎಳ್ಳು- ನೀರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಳ್ಳಾರಿಯಲ್ಲಿ ಹಳ್ಳ ಹಿಡಿದ ನೀರಾವರಿ ಯೋಜನೆ

2000- 2002 ನೇ ಆಸುಪಾಸಿನಲ್ಲಿ ಅಂದಿನ ಸರ್ಕಾರದ ನೀರಾವರಿ ಖಾತೆ ಹೊಂದಿದ್ದ ಹಾಲಿ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಈ ಯೋಜನೆಗೆ ಮತ್ತಷ್ಟು ಕಾಯಕಲ್ಪ ನೀಡುವ ಮುಖೇನ ಯೋಜನೆ ಅನುಷ್ಠಾನಕ್ಕೆ ವೇಗದ ಸ್ಪರ್ಶ ನೀಡಿದ್ದರು. ಆದರೆ, ಅದ್ಯಾವುದೂ ಕೂಡ ಇಲ್ಲಿ ಸಾಕಾರಗೊಳ್ಳಲಿಲ್ಲ ಎಂಬುದು ಮಾತ್ರ ದಿಟ. ತಾಲೂಕಿನಿಂದ ಅನತಿ ದೂರದಲ್ಲಿರುವ ಈ ಯಾಳ್ಪಿ ಕಗ್ಗಲ್ ಗ್ರಾಮದ ಹೊರವಲಯದಲ್ಲಿ ಈ ಏತ ನೀರಾವರಿ ಯೋಜನೆಯನ್ನ ಸ್ಥಾಪಿಸಲಾಗಿದೆ.

ಆದರೆ, ಇಲ್ಲಿನ ರೈತರ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಲಿಲ್ಲ. ಯಾಳ್ಪಿ, ಕಗ್ಗಲ್, ರೂಪನಗುಡಿ, ಲಿಂಗದೇವನಹಳ್ಳಿ, ಭೈರದೇವನಹಳ್ಳಿ ಸೇರಿದಂತೆ ಇತರ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಅಂದಾಜು ಮೂರು ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆ ಇದಾಗಿತ್ತು. ಆದರೆ ಜನಪ್ರತಿನಿಧಿಗಳು ಕೇವಲ ಚುನಾವಣೆ ಬಂದಾಗ ಮಾತ್ರ ಈ ಯೋಜನೆಯನ್ನ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡುತ್ತಾರೆಯೇ ಹೊರತು ನಂತರ ಯಾರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ABOUT THE AUTHOR

...view details