ಕರ್ನಾಟಕ

karnataka

ETV Bharat / state

ಗಣಿನಾಡಿನಲ್ಲಿ ‘ತಿಂಗಳ ಸೊಬಗು’ ಕಾರ್ಯಕ್ರಮದಲ್ಲಿ ಹಂಪಿ ಉತ್ಸವದ ಕೂಗು

ವಿವಿಧ ಕಲಾಪ್ರಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ‘ತಿಂಗಳ ಸೊಬಗು’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಬಳ್ಳಾರಿಯ ಬಯಲು ರಂಗಮಂದಿರದಲ್ಲಿ ನಡೆಯಿತು.

ಮೊಳಗಿದ ಹಂಪಿ ಉತ್ಸವದ ಕೂಗು

By

Published : Oct 13, 2019, 5:30 PM IST

ಬಳ್ಳಾರಿ: ವಿವಿಧ ಕಲಾಪ್ರಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ‘ತಿಂಗಳ ಸೊಬಗು’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಬಯಲು ರಂಗಮಂದಿರದಲ್ಲಿ ನಡೆಯಿತು. ಪ್ರತಿ ತಿಂಗಳ 2ನೇ ಶನಿವಾರ ‘ತಿಂಗಳ ಸೊಬಗು’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ಹೆಚ್ಚುವರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸುರೇಶ್ ಬಾಬು ತಿಳಿಸಿದರು.

ಕೆ.ಜಗದೀಶ್ ಅವರು ಕಳೆದ ಬಾರಿ ಹಂಪಿ ಉತ್ಸವಕ್ಕಾಗಿ ಹೋರಾಟ ಮಾಡದಿದ್ದರೆ ಉತ್ಸವ ನಡೆಯುತ್ತಿರಲಿಲ್ಲ. ಆದರೆ ಈ ವರ್ಷ ಸಹ ಅದೇ ಪರಿಸ್ಥಿತಿ ಉಂಟಾಗಿದೆ ಎಂದು ಕಲ್ಯಾಣ ಮಠದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

‘ತಿಂಗಳ ಸೊಬಗು’ ಕಾರ್ಯಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರಿಗೆ ಹಂಪಿ‌ ಉತ್ಸವದ ಬಗ್ಗೆ ತಿಳಿಸಿದ್ದೇವೆ. ಆದರೆ ಜಿಲ್ಲಾಡಳಿತ ಇದುವರೆಗೂ ಅದರ ಬಗ್ಗೆ ಕಾಳಜಿ ವಹಿಸಿಲ್ಲ. ಮೈಸೂರು ಭಾಗದಲ್ಲಿ ದಸರಾ ಉತ್ಸವ ನಡೆಯುತ್ತದೆ. ಆದರೆ ಹಂಪಿ ಉತ್ಸವ ನಡೆಸಲು ಏನು ಸಮಸ್ಯೆ ಎಂದು ಕಲ್ಯಾಣ ಮಠದ ಸ್ವಾಮೀಜಿ ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ರಂಜಿನ ಮತ್ತು ದೀಕ್ಷ, ಅವಂತಿಕ ನೃತ್ಯ ಪ್ರದರ್ಶನ ನೀಡಿದರು.

ABOUT THE AUTHOR

...view details