ಬಳ್ಳಾರಿ: ಸಿಡಿಲು ಬಡಿದು ರೈತ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿಯಲ್ಲಿ ಸಿಡಿಲಿನ ಆರ್ಭಟ: ರೈತ ಸಾವು - ಹಡಗಲಿ
ಬಳ್ಳಾರಿಯಲ್ಲಿ ಸಿಡಿಲಿನ ಅಬ್ಬರಕ್ಕೆ ಹಡಗಲಿಯ ರೈತ ಸಾವನ್ನಪ್ಪಿದ್ದಾನೆ.
ಬಳ್ಳಾರಿಯಲ್ಲಿ ಸಿಡಿಲಿನ ಆರ್ಭಟ
ಹೂವಿನಹಡಗಲಿ ತಾಲೂಕಿನ ಸೋಗಿ ಗ್ರಾಮದ ರೈತ ಚಂದ್ರೇಗೌಡ (35) ಮೃತ ವ್ಯಕ್ತಿ. ರೈತ ಚಂದ್ರೇಗೌಡ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಸದ್ಯ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕೆ.ವಿಜಯ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಇಟಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.