ಹೊಸಪೇಟೆ: ಸಿಡಿಲು ಬಡಿದು ಮೂವರು ಕುರಿಗಾಹಿಗಳು ಸಾವು - ವಿಜಯನಗರ ಜಿಲ್ಲೆ
ಸಿಡಿಲು ಬಡಿದು ಮೂವರು ಕುರಿಗಾಹಿಗಳು ಬಲಿ
17:00 May 04
ಸಿಡಿಲಿನ ಆರ್ಭಟಕ್ಕೆ ವಿಜಯನಗರ ಜಿಲ್ಲೆಯಲ್ಲಿ ಮೂವರು ಕುರಿಗಾಹಿಗಳು ಬಲಿಯಾಗಿದ್ದಾರೆ.
ಹೊಸಪೇಟೆ (ವಿಜಯನಗರ): ಸಿಡಿಲು ಬಡಿದ ಪರಿಣಾಮ ಮೂವರು ಕುರಿಗಾಹಿಗಳು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನೇಲಬೊಮ್ಮನ ಹಳ್ಳಿ ಮತ್ತು ಎಂಬಿ ಅಯ್ಯನಹಳ್ಳಿಯಲ್ಲಿ ಗ್ರಾಮಗಳಲ್ಲಿ ನಡೆದಿದೆ.
ಮೃತರನ್ನು ನೇಲಬೊಮ್ಮನ ಹಳ್ಳಿಯ ಕುರಿಗಾಹಿಗಳಾದ ಚಿನ್ನಾಪುರಿ (35) ಹೊಟ್ಟೆಪ್ಪ ವೀರಪ್ಪ(36) ಹಾಗೂ ಎಂ ಬಿ ಅಯ್ಯನಹಳ್ಳಿಯಲ್ಲಿ ಪತ್ರೆಪ್ಪ(36) ಮೃತರು.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : May 4, 2021, 5:40 PM IST