ಬಳ್ಳಾರಿ:ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಸ್ಕೂಟಿ ಒಂದು ಬೈಕ್ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಗಣಿನಗರಿಯಲ್ಲಿ ಎರಡು ಸ್ಕೂಟಿ, ಒಂದು ಬೈಕ್ ಬೆಂಕಿಗಾಹುತಿ - ಬ್ರೂಸ್ ಪೇಟೆ ಪೊಲೀಸ್ ಠಾಣೆ ಬಳ್ಳಾರಿ
ಬಳ್ಳಾರಿ ನಗರದ ಪಾತಕದಮ್ ಬೀದಿಯ ಮನೆಗಳ ಮುಂದೆ ನಿಲುಗಡೆ ಮಾಡಲಾಗಿದ್ದ ಎರಡು ಡಿಯೋ ಕಂಪನಿಯ ಸ್ಕೂಟಿಗಳು ಹಾಗೂ ಹೋಂಡಾ ಬೈಕ್ ಸುಟ್ಟು ಕರಕಲಾಗಿವೆ. ಈ ಸಂಬಂಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರೆಡು ಸ್ಕೂಟಿ, ಒಂದು ಬೈಕ್ ಬೆಂಕಿಗಾಹುತಿ
ನಗರದ ಪಾತಕದಮ್ ಬೀದಿಯ ಮನೆ ಮುಂದೆ ನಿಲುಗಡೆ ಮಾಡಲಾಗಿದ್ದ ಎರಡು ಡಿಯೋ ಕಂಪನಿ ಸ್ಕೂಟಿಗಳು ಹಾಗೂ ಹೋಂಡಾ ಆ್ಯಕ್ಟಿವಾ ಬೈಕ್ಗೆ ಯಾರೋ ಕಿಡಿಗೇಡಿಗಳು ಸೋಮವಾರ ಮಧ್ಯರಾತ್ರಿ 12.30 ರ ವೇಳೆ ಬೆಂಕಿ ಇಟ್ಟಿದ್ದಾರೆ. ಆ ಮೂರು ಬೈಕ್ಗಳು ಸುಟ್ಟು ಕರಕಲಾಗಿವೆ. ಆದರೆ ಈವರೆಗೂ ಯಾವುದೇ ಕಾರಣ ತಿಳಿದು ಬಂದಿಲ್ಲ.
ವಿಷಯ ತಿಳಿದ ಬ್ರೂಸ್ ಪೇಟೆ ಠಾಣೆಯ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.