ಕರ್ನಾಟಕ

karnataka

ETV Bharat / state

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಚಿಂತನೆ: ಸಚಿವ ಬಿ.ಸಿ.ಪಾಟೀಲ್​ - ಲಾಕ್​ಡೌನ್

ಮೆಣಸಿನಕಾಯಿ ಮಾರುಕಟ್ಟೆ ಖರೀದಿ ಮಾರುಕಟ್ಟೆಯನ್ನು ಬಳ್ಳಾರಿಯಲ್ಲಿ ಸ್ಥಾಪಿಸುವ ಚಿಂತನೆ ನಡೆಸಲಾಗಿದೆ. ಲಾಕ್​ಡೌನ್ ಹಿನ್ನೆಲೆ ಯಾವುದೇ ಕೃಷಿ ಸಂಬಂಧಿತ ಚಟುವಟಿಕೆ ನಿಲ್ಲಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಸಚಿವ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.

Thought for establishing chilli market in bellary
ಕೃಷಿ ಸಚಿವ ಬಿ.ಸಿ.ಪಾಟೀಲ್​

By

Published : Apr 8, 2020, 10:40 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಖರೀದಿ ಮಾರುಕಟ್ಟೆ ಸ್ಥಾಪನೆಗೆ ಚಿಂತನೆ ನಡೆಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ್​ ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್​

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್ ಆಗಿದ್ದರಿಂದ ಬ್ಯಾಡಗಿ‌ ಮೆಣಸಿನಕಾಯಿ ಮಾರಾಟ ಸ್ಥಗಿತವಾಗಿದೆ. ಹೀಗಾಗಿ ಇಲ್ಲಿಯೇ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ‌ಸ್ಥಾಪನೆ ಕುರಿತು‌ ರೈತರು‌ ಸಲಹೆ ನೀಡಿದ್ದಾರೆ. ಈ‌ ಬಗ್ಗೆ ಸಚಿವರು ಹಾಗೂ‌ ಬ್ಯಾಡಗಿ ಮೆಣಸಿನಕಾಯಿ ವರ್ತಕರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ‌‌ ಗಂಗಾವತಿ ತಾಲೂಕಿನಾದ್ಯಂತ ಆಲಿಕಲ್ಲು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ತಾಲೂಕಿಗೆ ನಾಳೆ ಭೇಟಿ ಕೊಡುವೆ. ಬೆಳೆ ನಷ್ಟಕ್ಕೆ ಒಳಗಾದ ರೈತರ ಹೊಲಗಳಿಗೆ ತೆರಳಿ ವೀಕ್ಷಣೆ ಮಾಡುತ್ತೇನೆ. ಈಗಾಗಲೇ ನಾನು 9 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವೆ ಎಂದರು.

ಕೃಷಿ ಇಲಾಖೆ ಅಧಿಕಾರಿಗಳಿಗೆ ಬೆಳೆ ನಷ್ಟದ ವರದಿ ಮಾಡುವಂತೆ ಸೂಚನೆ ನೀಡಿದ್ದೇನೆ. ಹಾಪ್​ ಕಾಮ್ಸ್ ಹೈದರಾಬಾದ್​ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿಲ್ಲ. ಕಲಬುರಗಿ, ಬೀದರ್ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಇಲ್ಲ. ಹೀಗಾಗಿ, ಲಾಕ್​​ಡೌನ್ ನೆಪವೊಡ್ಡಿ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ವಹಿವಾಟನ್ನು ‌ಸ್ಥಗಿತಗೊಳಿಸಬಾರದು. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಮಾರುಕಟ್ಟೆ ತೆರೆದಿಡಬೇಕು.‌ ಕೃಷಿಗೆ ಮಾತ್ರ ಲಾಕ್​ಡೌನ್ ಅನ್ವಯಿಸುವುದಿಲ್ಲ ಎಂದರು.

ABOUT THE AUTHOR

...view details