ಹೊಸಪೇಟೆ: ನಗರದ ರಾಣಿಪೇಟೆಯ ಕಚೇರಿಯಲ್ಲಿ ಕೂಡ್ಲಿಗಿ ಭಾಗದಲ್ಲಿ ಬಂಗಾರು ಹನುಮಂತು ನೇತೃತ್ವದಲ್ಲಿ ಸಂಗ್ರಹಿಸಿದ್ದ ವಿಜಯನಗರ ಜಿಲ್ಲೆ ಪರ 13 ಸಾವಿರ ಪತ್ರಗಳನ್ನು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ಗೆ ಸಲ್ಲಿಸಲಾಯಿತು.
ವಿಜಯನಗರ ಜಿಲ್ಲೆ ಪರವಾಗಿ ಸಚಿವ ಆನಂದ್ ಸಿಂಗ್ಗೆ ಕೂಡ್ಲಿಗಿ ಭಾಗದಿಂದ ಪತ್ರಗಳ ಸಲ್ಲಿಕೆ - Minister Anand Singh
ಕೂಡ್ಲಿಗಿ ಭಾಗದಲ್ಲಿ ಮುಖಂಡ ಬಂಗಾರು ಹನುಮಂತು ನೇತೃತ್ವದಲ್ಲಿ ಸಂಗ್ರಹಿಸಿದ್ದ ವಿಜಯನಗರ ಜಿಲ್ಲೆ ಪರ 13 ಸಾವಿರ ಪತ್ರಗಳನ್ನು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ಗೆ ಸಲ್ಲಿಸಲಾಯಿತು.
ಆನಂದ್ ಸಿಂಗ್ಗೆ ಕೂಡ್ಲಿಗಿ ಭಾಗದಿಂದ ಪತ್ರಗಳ ಸಲ್ಲಿಕೆ
ಈ ವೇಳೆ ಮಾತನಾಡಿದ ಸಚಿವ ಆನಂದ್ ಸಿಂಗ್, ಕೂಡ್ಲಿಗಿ ತಾಲೂಕಿನ 25 ಗ್ರಾಮ ಪಂಚಾಯಿತಿಯಿಂದ ಪತ್ರಗಳನ್ನು ಸಂಗ್ರಹಿಸಲಾಗಿದ್ದು, ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ವಿಜಯನಗರ ಜಿಲ್ಲೆಯಿಂದ ಅನುಕೂಲವಾಗಲಿದೆ ಎಂದರು.
ಮುಖಂಡ ಬಂಗಾರು ಹನುಮಂತು ಮಾತನಾಡಿ, ಕೂಡ್ಲಿಗಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಬೇಕು ಎಂಬುದು ಜನರ ಕನಸಾಗಿದೆ. ನಮ್ಮ ಭಾಗದಿಂದ ಪಕ್ಷಾತೀತವಾಗಿ ವಿಜಯನಗರ ಜಿಲ್ಲೆ ಸೇರ್ಪಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆನಂದ್ ಸಿಂಗ್ ಸ್ವಾರ್ಥಕ್ಕಾಗಿ ವಿಜಯನಗರ ಜಿಲ್ಲೆ ಮಾಡುತ್ತಿಲ್ಲ ಎಂದರು.