ಹೊಸಪೇಟೆ:ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ನಾವು ಸೃಜನಶೀಲರಾಗುತ್ತೇವೆ. ಕ್ರೀಡಾಕೂಟ ಆಯೋಜನೆ ಮಾಡುವುದರಿಂದ ಯುವಕರಲ್ಲಿ ಉತ್ಸಾಹ ಹೆಚ್ಚುತ್ತದೆ ಎಂದು ಮೈನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಧುಸೂದನ್ ಹೇಳಿದ್ರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಪ್ರತಿ ವರ್ಷವೂ ಕಾರ್ಮಿಕರ ಹಿತ ಗಮನದಲ್ಲಿಟ್ಟುಕೊಂಡು ಇಂತಹ ಕ್ರೀಡಾ ಕೂಟಗಳನ್ನು ಮೈನ್ಸ್ ಅಸೋಸಿಯೇಷನ್ ಏರ್ಪಡಿಸುತ್ತದೆ.
ಕಾರ್ಮಿಕರಿಗಾಗಿ ಕ್ರೀಡಾ ಕೂಟ ಆಯೋಜನೆ ಕೂಲಿ ಕಾರ್ಮಿಕರು ದಿನ ನಿತ್ಯವು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಕೆಲಸ ಬಿಟ್ಟರೆ ಬೇರೆ ಪ್ರಪಂಚ ನೆನಪಾಗುವುದಿಲ್ಲ. ಪ್ರತಿನಿತ್ಯ ಕೆಲಸ ಮಾಡುವುದು ಎಂದರೆ ಎಲ್ಲ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ. ಅವರ ಮನಸ್ಸಿಗೆ ನೆಮ್ಮದಿ ನೀಡುವುದಕ್ಕೆ ಎಲ್ಲಾ ಕಂಪನಿಗಳು ಇಂತಹ ಕಾರ್ಯಕ್ರಮ ಮಾಡುತ್ತಿರುತ್ತಾರೆ ಎಂದು ಮಧುಸೂದನ್ ಹೇಳಿದರು.
ಕೂಲಿ ಕಾರ್ಮಿಕರು ಕಂಪನಿ ಒಳಿತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುತ್ತಾರೆ. ಕಾರ್ಮಿಕ ವರ್ಗದ ಜನರು ಇಲ್ಲವಾದರೆ ತೊಂದರೆಯುಂಟಾಗುತ್ತದೆ. ಅವರ ಸಾಮರ್ಥ್ಯಕ್ಕೆ ತಕ್ಕಂತಹ ಆಟಗಳನ್ನು ನಾವು ಏರ್ಪಡಿಸಿದ್ದೇವೆ. ಬ್ಯಾಡ್ಮಿಂಟನ್, ಗುಂಡು ಎಸೆತ, ಚೆಸ್ ನಂತಹ ಬುದ್ಧಿವಂತಿಕೆ ಪಂದ್ಯಗಳನ್ನು ಆಡಿಸಲಾಗುತ್ತದೆ ಎಂದು ಹೇಳಿದರು.