ಹೊಸಪೇಟೆ(ವಿಜಯನಗರ): ತಾಲೂಕಿನ ಕಮಲಾಪುರ ಸರ್ಕಾರಿ ಮಯೂರ ಭುವನೇಶ್ವರಿ ಹೋಟೆಲ್ನಲ್ಲಿ ಇಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಅವರ ಸಭೆಯಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು.
ಇಂದು ಬೆಳಗ್ಗೆ 10.30 ರಿಂದ ಸಚಿವ ಸಿ ಪಿ ಯೋಗೇಶ್ವರ ಅವರ ಬರುವಿಕೆಗಾಗಿ ಮಾಧ್ಯಮದವರು ಕಾಯುತ್ತಿದ್ದರು. ಮಧ್ಯಾಹ್ನ 12.45 ಕ್ಕೆ ಬಂದ ಸಚಿವರು ಇಲಾಖೆಯ ಸಭೆಯನ್ನು ನಡೆಸಿದರು. ಆಗ ಮಾಧ್ಯಮದವರು ಸಭೆಗೆ ಹೋಗಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ.