ಬಳ್ಳಾರಿ : ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕೆಂದು ಎಂದು ಆಗ್ರಹಿಸಿ ಎಸ್. ಯು.ಸಿ.ಐ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ನಡೆಸಿದ ಎಸ್.ಯು.ಸಿ ಐ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಅಪ್ರಜಾತಾಂತ್ರಿಕ ಮತ್ತು ಕೋಮುವಾದಿ ಸಿಎಬಿ ಪೌರತ್ವ ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ಖಂಡಿಸುತ್ತದೆ. ತಕ್ಷಣವೇ ಮಸೂದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ರಾಯಲ್ ವೃತ್ತದಲ್ಲಿ ಎಸ್.ಯು.ಸಿ.ಐ (ಕಮ್ಯುನಿಸ್ಟ್ ) ಪಕ್ಷದ ರಾಜ್ಯ ಸೆಕ್ರಟೇರಿಯೆಟ್ ಸದಸ್ಯ ಕಾ.ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಎಸ್. ಯು.ಸಿ ಐ (ಕಮ್ಯುನಿಸ್ಟ್ ) ಪಕ್ಷದ ರಾಜ್ಯ ಸೆಕ್ರಟೇರಿಯೆಟ್ ಸದಸ್ಯ ಕಾ.ಸೋಮಶೇಖರ್. ಅಘ್ಪಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದಿರುವ ಹಿಂದೂ, ಸಿಖ್, ಬೌದ್ದರು, ಜೈನರು, ಪಾರ್ಸಿಗಳು, ಕ್ರೈಸ್ತ ರಿಗೆ ಈ ಮಸೂದೆಯ ಅನ್ವಯ ಪೌರತ್ವವನ್ನು ನೀಡಲಾಗುವುದು. ಮುಖ್ಯ ಉದ್ದೇಶ ನೆರೆ ದೇಶದಲ್ಲಿ ಹಿಂಸೆಗೊಳಗಾದ ಅಲ್ಪಸಂಖ್ಯಾತರಿಗೆ, ನಿರಾಶ್ರಿತರಿಗೆ ಅಶ್ರಯ ನೀಡುವುದಾಗಿದೆ. ಈ ಮಸೂದೆಯು ಭಾರತೀಯ ಪೌರತ್ವವನ್ನು ನಿರ್ಣಯಿಸುವುದರಲ್ಲಿ ಧರ್ಮವನ್ನು ಮಾನದಂಡ ಮಾಡಿರುವುದು ಅತ್ಯಂತ ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ ನಗರದ ಸ್ಥಳೀಯ ಸಮುತಿ ಕಾರ್ಯದರ್ಶಿ ಡಾ.ಪ್ರಮೋದ್, ಈಶ್ವರಿ, ಅಬ್ದುಲ್ ಖಾಲಿದ್, ಹೊನ್ನೂರ್ ಸಾಬ್, ವಹೀದಾ ಬೀ, ಶಾಂತ, ಹನುಮಪ್ಪ ಭಾಗವಹಿಸಿದ್ದರು.