ಕರ್ನಾಟಕ

karnataka

ETV Bharat / state

ವಿಜಯನಗರ ಕಾಲದಲ್ಲಿಯೂ ಕೃಷಿ, ನೀರಾವರಿಗೆ ಆದ್ಯತೆ

ವಿಜಯನಗರ ಸ್ರಾಮಾಜ್ಯವು ‌ಕೃಷಿ ಹಾಗೂ ನೀರಾವರಿಗೆ ನೀಡಿದ ಪ್ರಾಶಸ್ತ್ಯವನ್ನು ಈಗಲೂ ಕಾಣಬಹುದು. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

VIJAYAYANAGARA PERIOD
ವಿಜಯನಗರ ಕಾಲದಲ್ಲಿಯೂ ಕೃಷಿ, ನೀರಾವರಿಗೆ ಆದ್ಯತೆ

By

Published : Sep 2, 2020, 7:05 PM IST

ಹೊಸಪೇಟೆ: ಐತಿಹಾಸಿಕ ಹಂಪಿಯ ವಿಜಯನಗರ ಸ್ರಾಮಾಜ್ಯವೂ ಕಲೆ, ಸಂಸ್ಕೃತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕೃಷಿ ಹಾಗೂ ನೀರಾವರಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು ಎಂಬುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ.

ವಿಜಯನಗರ ಕಾಲದಲ್ಲಿಯೂ ಕೃಷಿ, ನೀರಾವರಿಗೆ ಆದ್ಯತೆ

ಹಂಪಿಯ ವಲಯದಲ್ಲಿ ಕೆರೆ, ಪುಷ್ಕರಣಿ, ನೀರಾವರಿ ಪೈಪ್​ಗಳು ವಿಜಯನಗರ ಸಾಮ್ರಾಜ್ಯದಲ್ಲಿ ಕೃಷಿಗೆ ಹಾಗೂ ನೀರಾವರಿಗೆ ನೀಡಿದ ಆದ್ಯತೆಯನ್ನು ಇವುಗಳು ಎತ್ತಿ ತೋರಿಸುತ್ತವೆ. ವಿಜಯನಗರ ಕಾಲದಲ್ಲಿ ಅಚ್ಯುತದೇವರಾಯನ ಕಾಲದ (ಕ್ರಿ.ಶ.1539) ಶಾಸನವೊಂದರಲ್ಲಿ ಕೃಷಿ ಕುರಿತು ಉಲ್ಲೇಖವಾಗಿದೆ. ತೆಂಗು, ಹಲಸು, ಎಳೆ-ಬಳ್ಳಿ, ಹುಣಿಸಿ, ನಿಂಬೆ, ಮಾದಳ ಮೊದಲಾದವುಗಳನ್ನು ಬೆಳೆಯುತ್ತಿದ್ದರು ಎಂದು ಇದರಿಂದ ತಿಳಿಯುತ್ತದೆ.

ವಿಜಯನಗರ ಕಾಲದಲ್ಲಿಯೂ ಕೃಷಿ, ನೀರಾವರಿಗೆ ಆದ್ಯತೆ

ಈ ಬೆಳೆಗಳಿ ಹಸಿರುವಾಣಿ ಸುಂಕವನ್ನು ವಿಧಿಸಲಾಗುತ್ತಿತ್ತು. ವಿಜಯನಗರ ಸಮ್ರಾಜ್ಯಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರು ಕೃಷಿ ಬಗ್ಗೆ ಬರೆದುಕೊಂಡಿದ್ದಾರೆ. ಕ್ರಿ.ಶ 1570-71ರಲ್ಲಿ ಇಲ್ಲಿಗೆ ಬಂದಿರಬಹುದಾದ ಡೊಮಿಂಗೊ ಪಾಯಸನ ಬರಹಗಳಲ್ಲಿ ಅನೇಕ ಕೃಷಿ ಸಂಬಂಧಿತ ವಿಷಯಗಳನ್ನು ಉಲ್ಲೇಖ‌ ಮಾಡಿದ್ದಾನೆ.

ವಿಜಯನಗರ ಕಾಲದಲ್ಲಿಯೂ ಕೃಷಿ, ನೀರಾವರಿಗೆ ಆದ್ಯತೆ

ಹಲಸು, ಮಾವು, ಹುಣಸೆ, ನಿಂಬೆ, ಜಂಬೀರ, ಕಿತ್ತಳೆ, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಹಾಗೂ ಭತ್ತ, ಮುಸಕಿನ ಜೋಳ, ಜವೆ‌‌ ಮೊದಲಾದ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದರು. ಅಲ್ಲದೇ, ಅಡಕೆ, ತೆಂಗು ಮುಂತಾದ ವಾಣಿಜ್ಯ ಬೆಳೆಗಳಿದ್ದವು ಎಂದು ಪಾಯಸನು ಹೇಳಿರುವುದನ್ನು ಕಾಣಬಹುದಾಗಿದೆ.

ವಿಜಯನಗರ ಕಾಲದಲ್ಲಿಯೂ ಕೃಷಿ, ನೀರಾವರಿಗೆ ಆದ್ಯತೆ

ಹಂಪಿ ವಲಯದಲ್ಲಿ ನೀರಾವರಿಗೆ ಸಾಕ್ಷಿ ಎಂಬಂತೆ ಕೆರೆ ಮತ್ತು ನೀರಾವರಿ ಪೈಪ್​ ಹಾಗೂ ಪುಷ್ಕರಣಿಗಳನ್ನು ಈಗಲೂ ಕಾಣಬಹುದು. ಕಮಲಾಪುರ ಕೆರೆ, ವಿರೂಪಾಕ್ಷೇಶ್ವರ ಮನ್ಮಥ ಹೊಂಡ, ಅಕ್ಕ-ತಂಗಿಯ ಗುಡ್ಡದ ಪುಷ್ಕರಣಿ, ಕೋದಂಡರಾಮ ದೇವಸ್ಥಾನ ಬಳಿ ಪುಷ್ಕರಣಿಗಳನ್ನು ಕಾಣಬಹುದಾಗಿದೆ. ‌ಭಾರತೀಯ ಪುರಾತತ್ವ ಇಲಾಖೆ ರಾಣಿಸ್ನಾನ ಗೃಹದ ಬಳಿ ದೊಡ್ಡ ಗಾತ್ರದ ಪುಷ್ಕರಣಿ ಉತ್ಖನ ನಡೆಸಿದೆ.

ಈ ಹಿಂದೆ ಅಲ್ಲಿ ಗಿಡಗಂಟಿಗಳು ಬೆಳೆದಿದ್ದವು. ಸುತ್ತಲೂ ನೀರಾವರಿಯ ಪೈಪ್​ಗಳನ್ನು ಕಾಣಬಹುದು.‌ ಹಾಗಾಗಿ ಭಾರತೀಯ ಪುರಾತತ್ವ ಇಲಾಖೆಯ ಉತ್ಖನ ನಡೆಸಲು ಮುಂದಾಗಿದೆ. ಈಗ ಅರ್ಧದಷ್ಟು ಕಾರ್ಯ ಮುಗಿದಿದ್ದು, ಇನ್ನು ಅರ್ಧ ಕಾರ್ಯ ಬಾಕಿ ಇದೆ. ಕೆಳ ವರ್ಷಗಳ ಹಿಂದೆ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಬಿಷ್ಟಪ್ಪಯ್ಯ ಗೋಪುರ ಬಳಿ ಚಿಕ್ಕ ಗಾತ್ರದ ಸುಂದರ ಪುಷ್ಕರಣಿ ಪತ್ತೆಯಾಗಿತ್ತು. ಆ ಪುಷ್ಕರಣಿಯಲ್ಲಿ ಸುಂದರ ಉಬ್ಬು ಶಿಲ್ಪಗಳಿಂದ ಕೂಡಿದೆ.‌ ಈಗ ಉತ್ತಮವಾಗಿ ಮಳೆಯಾಗಿದ್ದು, ಪುಷ್ಕರಣಿ ತುಂಬಿ ಕಂಗೊಳಿಸುತ್ತಿದೆ.

ವಿಜಯನಗರದ ಕಾಲದಲ್ಲಿ‌‌‌‌‌ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.‌ ಕೆರೆ, ಚೆಕ್ ಡ್ಯಾಂ ನಿರ್ಮಿಸಿರುವುದು ಕೃಷಿ ಪ್ರಾಶಸ್ತ್ಯ ನೀಡಿರುವುದು ತಿಳಿಯುತ್ತದೆ.‌ ನೀರಾವರಿ ಹಾಗೂ ಕೃಷಿ ಕುರಿತಾದ ಸಾಕಷ್ಟು ಸಂಶೋಧನೆಗಳು‌ ನಡೆದಿವೆ.‌ ಅಲ್ಲದೇ, ಹೊಂಡಗಳ ನಿರ್ಮಾಣದಿಂದ ನೀರಿನ ಸದ್ಭಳಕೆ ತಿಳಿಯುತ್ತದೆ. ಮಳೆ ನೀರಿನಿಂದ ಹೊಂಡಗಳನ್ನು ತುಂಬಿಸಲಾಗುತ್ತಿತ್ತು. ಮಹಾನವಮಿ ದಿಬ್ಬ ಹಿಂಭಾಗದಲ್ಲಿ ತೋಟ ಇತ್ತು. ಅಲ್ಲದೇ, ಬಾವಿಗಳನ್ನು ಕಾಣಬಹುಗು ಎಂದು ಹೊಸಪೇಟೆ ಸಂಶೋಧಕ ಮೃತ್ಯುಂಜಯ ರುಮಾಲೆ ಹೇಳಿದರು.

ABOUT THE AUTHOR

...view details