ಕರ್ನಾಟಕ

karnataka

ETV Bharat / state

ಹಿಂದೂ ಮಹಾಸಭಾದ ಗಣೇಶ ನಿಮ್ಮಜ್ಜನ; ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್... - ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ನಿಮ್ಮಜ್ಜನ ಗುರುವಾರ ನಡೆಯಲಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಹಿಂದೂ ಮಹಾಸಭಾದ ಗಣೇಶ ನಿಮ್ಮಜ್ಜನ; ಜಿಲ್ಲೆಯಾದ್ಯಂತ ಬಿಗಿಯಾಯ್ತು ಪೊಲೀಸ್ ಬಂದೋಬಸ್ತ್

By

Published : Sep 12, 2019, 5:12 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ನಿಮ್ಮಜ್ಜನ ಗುರುವಾರ ನಡೆಯಲಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಹಿಂದೂ ಮಹಾಸಭಾದ ಗಣೇಶ ನಿಮ್ಮಜ್ಜನ; ಜಿಲ್ಲೆಯಾದ್ಯಂತ ಬಿಗಿಯಾಯ್ತು ಪೊಲೀಸ್ ಬಂದೋಬಸ್ತ್

ಗಣೇಶಮೂರ್ತಿ ನಿಮ್ಮಜ್ಜನ ಮುನ್ನಾ ದಿನವಾದ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರ ನೇತೃತ್ವದ ಅಧಿಕಾರಿಗಳ ತಂಡವು ಸಿರುಗುಪ್ಪ ನಗರದ ಪ್ರಮುಖ ರಾಜಬೀದಿಗಳಲ್ಲಿ ಪಥ ಸಂಚಲನ ನಡೆಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಡಿವೈಎಸ್ಪಿ ಅರುಣಕುಮಾರ್ ನೇತೃತ್ವದ ಅಂದಾಜು 80ಕ್ಕೂ ಅಧಿಕ ಮಂದಿ ಅಧಿಕಾರಿಗಳು, ಸಿಬ್ಬಂದಿ ಸರಿ ಸುಮಾರು ಐದು ಕಿಲೋಮೀಟರ್ ಪಥ ಸಂಚಲನ ನಡೆಸಿ, ಕಟ್ಟೆಚ್ಚರದ ಜಾಗೃತಿ ಮೂಡಿಸಿದರು.

ಬಿಗಿಯಾದ ಪೊಲೀಸ್ ಬಂದೋಬಸ್ತ್:

ಸಿರುಗುಪ್ಪ ನಗರದ ಗಣೇಶಮೂರ್ತಿ ನಿಮ್ಮಜ್ಜನದ ವೇಳೆ, ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನಚ್ಚರಿಕೆ ವಹಿಸುವ ಸಲುವಾಗಿಯೇ ಬಿಗಿಯಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ABOUT THE AUTHOR

...view details