ಬಳ್ಳಾರಿ:ಹಂಪಿ ಉತ್ಸವದಲ್ಲಿ ನೀತಿ ಮೋಹನ್ ರಸಮಂಜರಿ ಕಾರ್ಯಕ್ರಮ ನಡೆಯುವಾಗ ಪ್ರೇಕ್ಷಕರಿಗೆ ತೊಂದರೆ ನೀಡುತ್ತಿದ್ದ ಪುಂಡ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹಂಪಿ ಉತ್ಸವದಲ್ಲಿ ಪುಂಡಾಟಿಕೆ ಪ್ರದರ್ಶಿಸಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಹಂಪಿ ಉತ್ಸವದಲ್ಲಿ ನೀತಿ ಮೋಹನ್ ರಸಮಂಜರಿ ಕಾರ್ಯಕ್ರಮ ನಡೆಸಿಕೊಡುವಾಗ ಕೆಲವು ಯುವಕರು ಪ್ರೇಕ್ಷಕರಿಗೆ ತೊಂದರೆ ಕೊಟ್ಟು ಪುಂಡಾಟಿಕೆ ಪ್ರದರ್ಶಿಸಿದ್ದರು. ಪ್ರೇಕ್ಷಕರ ಮೇಲೆ ಬಾಟಲಿ, ಬಟ್ಟೆ ಎಸೆದು ಅಸಭ್ಯವಾಗಿ ವರ್ತಿಸಿದ ಯುವಕರಿಗೆ ಪೊಲೀಸರು ಶಿಸ್ತು ಕಾಪಾಡುವಂತೆ ಎಚ್ಚರಿಕೆ ನೀಡಿದರು.
ಹೊಸಪೇಟೆ ತಾಲೂಕಿನ ಹಂಪಿ ಉತ್ಸವ- 2020ರ ನಿಮಿತ್ತ ಕೃಷ್ಣದೇವರಾಯ ವೇದಿಕೆಯಲ್ಲಿ ಮುಂಬೈನ ನೀತಿ ಮೋಹನ್ ಮತ್ತು ತಂಡದವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆಗ ಕೆಲ ಯುವಕರು ಗಲಾಟೆ ಮಾಡಿದರು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸ್ ಯುವಕರಿಗೆ ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ವೇದಿಕ ಮೇಲೆ ಸಾಂಸ್ಕೃತಿ ಕಾರ್ಯಕ್ರಮಗಳು ನಡಯುತ್ತಿದ್ದಂತೆ ಕೆಲ ಪುಂಡ ಯುವಕರು ಪ್ರೇಕ್ಷಕರ ಮೇಲೆ ಬಾಟಲಿ, ಬಟ್ಟೆ ಎಸೆದು ಅಸಭ್ಯವಾಗಿ ವರ್ತಿಸಿದರು. ಗಲಾಟೆ ಮಾಡುತ್ತಿದ್ದ ಯುವಕರ ಬಳಿ ತೆರಳಿದ ಪೊಲೀಸರು, ಕಾರ್ಯಕ್ರಮಕ್ಕೆ ಭಂಗ ತರದಂತೆ, ಇನ್ನೊಬ್ಬರಿಗೆ ತೊಂದರೆ ಮಾಡದಂತೆ ಕಾರ್ಯಕ್ರಮಗಳನ್ನು ವೀಕ್ಷಿಸಿ. ಇಲ್ಲದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.