ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ಹಮಾಲಿ ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ.
ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ ಇಂದು ನಾನಾ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನಾ ಮೆರವಣಿಗೆಗೆ ಹಮಾಲಿ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ, ಬಳ್ಳಾರಿ ವಿಭಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ ಬಳ್ಳಾರಿ ನಗರದ ನಗರೂರು ನಾರಾಯಣರಾವ್ ಉದ್ಯಾನವನದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ನಾನಾ ಕನ್ನಡಪರ ಸಂಘಟನೆಗಳ ಮುಖಂಡರಾದ ಸಿರಿಗೇರಿ ಪನ್ನರಾಜ, ಟಿ.ಜಿ.ವಿಠಲ, ಕೆ. ಎರಿಸ್ವಾಮಿ, ದರೂರು ಪುರುಷೋತ್ತಮಗೌಡ, ಬಂಡೇಗೌಡ, ಸಿದ್ಮಲ್ ಮಂಜುನಾಥ, ಮೀನಳ್ಳಿ ತಾಯಣ್ಣ, ಕುಡಿತಿನಿ ಶ್ರೀನಿವಾಸ ಸೇರಿದಂತೆ ಅನೇಕ ಕಾರ್ಯಕರ್ತ ಮುಖಂಡರು ಜಮಾಯಿಸಿ ಸಚಿವ ಆನಂದ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನು ಓದಿ:ಗೋಹತ್ಯೆ ನಿಷೇಧ ಬಿಲ್ ತಂದೇ ತರ್ತೇವೆ: ಸಚಿವ ಪ್ರಭು ಚವ್ಹಾಣ್