ಕರ್ನಾಟಕ

karnataka

ETV Bharat / state

ಬಳ್ಳಾರಿ ವಿಭಜನೆಗೆ ವಿರೋಧ: ನ.26 ರಂದು ಬಳ್ಳಾರಿ ಬಂದ್​ಗೆ ಕರೆ - ಬಳ್ಳಾರಿ ಜಿಲ್ಲಾ ಸುದ್ದಿ

ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ಪರ - ವಿರೋಧದ ಚರ್ಚೆಯ ನಡುವೆಯೇ ಬಳ್ಳಾರಿ ಬಂದ್​ಗೆ ಕರೆ ನೀಡಲಾಗಿದೆ. ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಬಂದ್​ಗೆ ಕರೆ ನೀಡಿದೆ.

Opposition to the division of Bellary: Call for band at Nov,26
ಬಳ್ಳಾರಿ ವಿಭಜನೆಗೆ ವಿರೋಧ: ನ.26 ರಂದು ಬಳ್ಳಾರಿ ಬಂದ್​ಗೆ ಕರೆ

By

Published : Nov 19, 2020, 2:25 PM IST

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ನವೆಂಬರ್ 26 ರಂದು ಬಳ್ಳಾರಿ ಜಿಲ್ಲೆ ಬಂದ್​ಗೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದೆ. ಬಳ್ಳಾರಿಯಲ್ಲಿಂದು ನಡೆದ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಸಭೆಯಲ್ಲಿ ಜಿಲ್ಲೆಯ ಬಂದ್​​ಗೆ ನಿರ್ಧರಿಸಲಾಗಿದೆ.

ಮರಾಠ ಅಭಿವೃದ್ಧಿ ನಿಗಮ ಹಿನ್ನೆಲೆ ಕೆಲ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದು, ಆ ಬಂದ್ ದಿನಾಂಕ ನೋಡಿಕೊಂಡು ಬಳ್ಳಾರಿ ಬಂದ್​​​ಗೆ ಅಂತಿಮ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

ಒಬ್ಬರ ಸ್ವಾರ್ಥಕ್ಕಾಗಿ ಬಳ್ಳಾರಿ ಜಿಲ್ಲೆ ಒಡೆಯಬೇಡಿ. ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆ‌ ರಚನೆಗೆ ಆನಂದ ಸಿಂಗ್ ಮುಂದಾಗಿದ್ದಾರೆ. ಹೊಸಪೇಟೆಯಿಂದ ಹಂಪಿವರೆಗಿನ ತಮ್ಮ ಭೂಮಿಗೆ ಉತ್ತಮ ಬೆಲೆ ಬರಲಿ ಅನ್ನೋ ಕಾರಣಕ್ಕೆ ಜಿಲ್ಲೆ ರಚನೆಗೆ ಆನಂದ ಸಿಂಗ್ ಮುಂದಾಗಿದ್ದಾರೆಂದು ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಕುಡಿತಿನಿ ಶ್ರೀನಿವಾಸ ದೂರಿದ್ದಾರೆ.

ಜಿಲ್ಲೆ ಮಾಡೋದಿದ್ದರೆ ಮೊದಲು ಬೆಳಗಾವಿ, ತೂಮಕೂರು ಜಿಲ್ಲೆಗಳನ್ನು ವಿಭಜಿಸಿ. ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರೇ ಕೇವಲ ಬೆಂಬಲ ಕೊಡೋದಲ್ಲ, ಮುಂದೆ ನಿಂತು ಹೋರಾಡೋಣ ಬನ್ನಿ. ಸಚಿವ ಶ್ರೀರಾಮುಲು ತಮ್ಮ ಸ್ವಾರ್ಥಕ್ಕಾಗಿ ವಿಜಯನಗರ ಜಿಲ್ಲೆ ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details