ಹೊಸಪೇಟೆ: ರಾಜ್ಯ ಸರ್ಕಾರ ಕೊರೊನಾ ಹರಡಂತೆ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ, ವಿಶ್ವವಿಖ್ಯಾತ ಹಂಪಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಇಂದು ವೀಕೆಂಡ್ ಆಗಿರುವುದರಿಂದ ವಿರೂಪಾಕ್ಷೇಶ್ವರ ದೇವಸ್ಥಾನ ಹಾಗೂ ಸ್ಮಾರಕಗಳಿಗೆ ಹೆಚ್ಚಿನ ಜನರು ಆಗಮಿಸಿದ್ದಾರೆ. ಕೆಲ ಪ್ರವಾಸಿಗರು ಮಾಸ್ಕ್ ಹಾಕಿಕೊಂಡು ನಿಯಮಗಳನ್ನು ಪಾಲಿಸಿದರೆ, ಇನ್ನು ಕೆಲವರು ಅಸಡ್ಡೆ ತೋರುತ್ತಿದ್ದಾರೆ. ಇದು ಕೊರೊನಾ ಹರಡುವುದಕ್ಕೆ ಮುನ್ನುಡಿಯಾಗಬಹುದು.
ಈ ಹಿಂದೆ ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ಇದನ್ನು ಮತ್ತೆ ಮುಂದುವರಿಸಿಕೊಂಡು ಹೋಗಬೇಕು.
ಈಟಿವಿ ಭಾರತದೊಂದಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಎಚ್.ಎಂ.ಪ್ರಕಾಶರಾವ್ ಮಾತನಾಡಿ, "ಈ ಹಿಂದೆ ಕೊರೊನಾ ನಿಯಮಗಳನ್ನು ಕಠಿಣ ರೀತಿಯಲ್ಲಿ ಜಾರಿಗೊಳಿಸಲಾಗಿತ್ತು. ಈಗ ಮತ್ತೆ ಪ್ರವಾಸಿಗರಿಗೆ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗುವುದು. ಅಲ್ಲದೇ, ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದರು.