ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾದರೆ ಗಣಿ ಜಿಲ್ಲೆಯ ಶಾಸಕರ ಸರಣಿ ರಾಜೀನಾಮೆಯೂ ಶುರುವಾಗಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಡಿಭಾಗದ ಜಿಲ್ಲೆಯ ವಿಭಜನೆ ಮಾಡೋ ಮುನ್ನ ಬಹಳ ಎಚ್ಚರಿಕೆ ವಹಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶಾಸಕ ನಾಗೇಂದ್ರ ಹೇಳಿದ್ದಾರೆ.
ಬಳ್ಳಾರಿಯ ಬುಡಾ ಕಚೇರಿಯಲ್ಲಿರುವ ರಾಜ್ಯಸಭಾ ಸದಸ್ಯರ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಭಾಷಾ- ಬಾಂಧವ್ಯ ಹದಗೆಡಲಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತರಲಾಗಿದೆ. ಮುಂದೆ ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಹೀಗೆ ಮುಂದುವರಿದರೆ ಹೋರಾಟ ತೀವ್ರತರವಾಗಲಿದೆ ಎಂದರು.
ಬಳ್ಳಾರಿ ವಿಭಜನೆ ಕುರಿತು ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ಪ್ರತಿಕ್ರಿಯೆ ದೆಹಲಿ ಹಿಂಸಾಚಾರಕ್ಕೆ ಖಂಡನೆ
ದೆಹಲಿಯ ರೈತರ ಹೋರಾಟದಲ್ಲಿ ಭಾಗಿಯಾಗಿ ಗಲಭೆ-ದಾಂಧಲೆ ಮಾಡಿದವರ ವಿರುದ್ಧ ಸೂಕ್ತ ತನಿಖೆಯಾಗಲಿ ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ರೈತ ಮುಖಂಡನ ಸೋಗಿನಲ್ಲಿ ದೀಪ್ ಸಿಂಗ್ ಸಿಧು ಭಾಗಿಯಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಗಲಭೆ- ದಾಂಧಲೆ ಸೃಷ್ಠಿಗೆ ಕಾರಣರಾಗಿದ್ದು ಯಾಕೆ? ಆತ ಯಾರ ಬೆಂಬಲಿಗ ಎಂಬುದರ ಕುರಿತು ತನಿಖೆಯಾಗಬೇಕು. ಆತ ಸೇರಿದಂತೆ ಆತನ ಸಹಚರರನ್ನ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ವೀರಭದ್ರೇಶ್ವರ ಜಾತ್ರೆಯಲ್ಲಿ ರಸ್ತೆ ಪಕ್ಕಕ್ಕೆ ತೆರಳಿದ ರಥ: ಜನರ ನಿಯಂತ್ರಣಕ್ಕೆ ಪೊಲೀಸರಿಂದ ಲಘು ಲಾಠಿ ಜಾರ್ಜ್