ಹೊಸಪೇಟೆ: ನಗರಸಭೆಗೆ ಮಹಾನಗರ ಪಾಲಿಕೆ ಅರ್ಹತೆ ಇದೆ. ಕೆಲ ಕೊರತೆಗಳಿದ್ದು, ಅದನ್ನು ಸರಿಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಹೊಸಪೇಟೆ ನಗರಸಭೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರುವ ಅರ್ಹತೆ: ಆನಂದ್ ಸಿಂಗ್ ಇಲ್ಲಿನ ನಗರಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಅರ್ಹತೆ ಹೊಂದಿದ್ದರೆ ವರ್ಷಕ್ಕೆ 100 ಕೋಟಿ ರೂ.ಅನುದಾನ ಲಭ್ಯವಾಗಲಿದೆ. ಈ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಹೊಸಪೇಟೆಯು ಸ್ಮಾರ್ಟ್‌ಸಿಟಿ ವ್ಯಾಪ್ತಿಗೆ ಬರಲು ಮಾನದಂಡದಲ್ಲಿ ಹಿಂದೆ ಇವೆ.
ಜನಸಂಖ್ಯೆ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಅರ್ಹತೆ ಪಡೆಯಬಹುದಾಗಿದೆ. ಹೊಸಪೇಟೆ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಬರಲು ಸಮಯ ಹಿಡಿಯುತ್ತದೆ. ಬಳ್ಳಾರಿಗೆ ಮೊದಲ ಆದ್ಯತೆ. ಹೊಸಪೇಟೆಯು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಬರಲಿಲ್ಲ ಅಂದರೇ ಪರವಾಗಿಲ್ಲ.
ವಿಜಯನಗರ ಜಿಲ್ಲೆಗೆ ಅಭಿವೃದ್ಧಿ ಕಾರ್ಯಕ್ಕಾಗಿ ಬಜೆಟ್ನಲ್ಲಿ 50 ಕೋಟಿ ರೂ. ಅನುದಾನ ಬೇಡಿಕೆ ಸಲ್ಲಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.