ವಿಜಯನಗರ:ಸಾಹಿತಿ ಕುಂ.ವೀರಭದ್ರಪ್ಪಗೆ ಮತ್ತೆ ಬೆದರಿಕೆ ಪತ್ರ ಬಂದಿದ್ದು, ನನಗೆ ಬಂದ 16ನೇ ಬೆದರಿಕೆ ಪತ್ರ ಇದಾಗಿದೆ ಎಂದು ಅವರು ಈ ಪತ್ರವನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ಪದೇ ಪದೆ ಕೊಟ್ಟೂರಿನ ಮನೆಗೆ ಈ ಪತ್ರಗಳು ಬರುತ್ತಿದ್ದು, ಹೀಗೆ ಬಂದ ಪತ್ರಗಳನ್ನು ಅವರು ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ.
ಸಾಹಿತಿ ಕುಂ.ವೀರಭದ್ರಪ್ಪಗೆ ಬಂದಿರುವ ಬೆದರಿಕೆ ಪತ್ರ ಜೀವ ಬೆದರಿಗೆ ಪತ್ರದಲ್ಲಿ ಏನಿದೆ?:ನಿಮ್ಮ ಜೀವ ಅಧರ್ಮದಿಂದ ತುಂಬಿದೆ, ಇಂದಲ್ಲ, ನಾಳೆ ಅಜ್ಞಾನದ ದೀಪ ಆರುವುದು ನಿಶ್ಚಿತ. ಕರ್ನಾಟಕ ರಾಜ್ಯದಲ್ಲಿ ಈಗ ಕಂಸನ ಆಡಳಿತ ಪ್ರಾರಂಭ ಆಗಿದೆ. ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ, ನಿಮ್ಮಂಥ ದುರ್ಜನ ದೇಶದ್ರೋಹಿಗಳಿಗೆ, ಮುಸ್ಲಿಂ ಮತಾಂಧರಿಗೆ, ಮತಾಂತರಿ ಕ್ರೈಸ್ತರಿಗೆ ಇದು ಸಂಪ್ರಿಯಾ ಸರ್ಕಾರ, ಉರಿಯಿರಿ ಮಕ್ಕಳ ಉರಿಯಿರಿ’ ಎಂಬ ಸಾಲುಗಳಿರುವ ಈ ಪತ್ರವನ್ನು ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ ಬರೆಯಲಾಗಿದೆ. ಕೊನೆಗೆ ಜೈ ಹಿಂದು ಜೈ ಹಿಂದು ರಾಷ್ಟ್ರ ಎಂದು 5 ಬಾರಿ ಬರೆದಿದ್ದಾರೆ.
ಪ್ರೇಮ ಪತ್ರಗಳಿದ್ದಂತೆ:ಈ ಬೆದರಿಕೆ ಪತ್ರಗಳನ್ನು ನಾನು ಪೊಲೀಸರಿಗೆ ನೀಡಿರುವೆ. ಪ್ರತಿ ಬಾರಿ, ಪತ್ರ ಬಂದಾಗಲೂ ಪೊಲೀಸರಿಗೆ ಒಪ್ಪಿಸಿರುವೆ, ಹೀಗೆ ಬಂದಿರುವ ಪತ್ರಗಳು ನನಗೆ ಪ್ರೇಮ ಪತ್ರಗಳಿದ್ದಂತೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದ್ದಾರೆ.
ಸಾಹಿತಿ ಕುಂ.ವೀರಭದ್ರಪ್ಪಗೆ ಬಂದಿರುವ ಬೆದರಿಕೆ ಪತ್ರ ಇದನ್ನೂ ಓದಿ:ನೂತನ ಸಂಸತ್ ಉದ್ಘಾಟನೆ ಸಂವಿಧಾನವನ್ನೇ ಅಣಕ ಮಾಡುವಂತಿತ್ತು: ಎಚ್. ವಿಶ್ವನಾಥ್
ಸಾಹಿತಿ ಬಂಜಗೆರೆ ಜಯಪ್ರಕಾಶ್ಗೂ ಬಂದ ಜೀವ ಬೆದರಿಕೆ ಪತ್ರ:ಮತ್ತೊಂದೆಡೆ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರಿಗೂ ಇಂದು ಇಂತಹದ್ದೇ ಜೀವ ಬೆದರಿಕೆ ಪತ್ರ ಬಂದಿದೆ. ಅನಾಮಿಕನೊಬ್ಬನಿಂದ ಬಂದಿರುವ ಪತ್ರ ಇದಾಗಿದೆ. ಬಂಡಾಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಸಾಹಿತಿ ಬಂಜಗೆರೆ ಜಯಪ್ರಕಾಶ್ ಹಾರೋಹಳ್ಳಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಜೀವ ಬೆದರಿಕೆ ಪತ್ರ ಸಿಕ್ಕಿದ ಹಿನ್ನೆಲೆಯಲ್ಲಿ ಹಾರೋಹಳ್ಳಿಯಲ್ಲಿರುವ ಬಂಜಗೆರೆ ಮನೆಗೆ ಪೊಲೀಸರು ಭೇಟಿ ವಿಚಾರಣೆ ನಡೆಸುತ್ತಿದ್ದಾರೆ.
ಜೀವ ಬೆದರಿಗೆ ಪತ್ರದಲ್ಲಿ ಏನಿದೆ?: ಪತ್ರದ ಮೇಲ್ಭಾಗದಲ್ಲಿ ಮೂರು ಕಡೆಗಳಲ್ಲಿ ಶ್ರೀ ಎಂದು ಬರೆಯಲಾಗಿದೆ. ಆ ನಂತರ ಬಂಜಗೆರೆ ಜಯಪ್ರಕಾಶ ಅವರಿಗೆ ಎಂದು ಬರೆಯಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಂಸನ ಆಡಳಿತ ಪ್ರಾರಂಭ. ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ. ನಿಮ್ಮಂತಹವರಿಗೆ, ದುರ್ಜನ ದೇಶದ್ರೋಹಿಗಳಿಗೆ, ಮತಾಂದ, ಮುಸ್ಲಿಂ, ಮತಾಂತರಿ ಕ್ರೈಸ್ತರಿಗೆ ಪ್ರಿಯ ಸರ್ಕಾರ. ಉರಿಯಿರಿ ಮಕ್ಕಳ ಉರಿಯಿರಿ. ನಿಮ್ಮ ಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ ನಿಶ್ಚಿತ. ಬಂಜಗೆರೆ ಜಯಪ್ರಕಾಶ ನಿಶ್ಚಿತ ನಿನ್ನ ಅಂತ್ಯ ಎಂದು ಬರೆದು ಸಹಿಷ್ಟು ಹಿಂದು ಎಂದು ಬರೆಯಲಾಗಿದೆ. ಕೊನೆಗೆ ಜೈ ಹಿಂದು ಜೈ ಹಿಂದು ರಾಷ್ಟ್ರ ಎಂದು 2 ಬಾರಿ ಬರೆಯಲಾಗಿದೆ.
ಇದನ್ನೂ ಓದಿ:ಬಿಎಸ್ವೈ ಭೇಟಿ ಮಾಡಿದ ಮಾಜಿ ಸಿಎಂ ಬೊಮ್ಮಾಯಿ: ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ಚರ್ಚೆ ?