ಕರ್ನಾಟಕ

karnataka

ETV Bharat / state

ಕೆಂಎಫ್​​ನಲ್ಲಿ ರೇವಣ್ಣ ಹಾಲು ಕರೆದಿಲ್ಲ, ಕುಡಿದಿದ್ದಾರೆ: ಶಾಸಕ ಭೀಮಾನಾಯ್ಕ ಗರಂ - ಹೆಚ್.ಡಿ.ರೇವಣ್ಣ

ಬಳ್ಳಾರಿಯಲ್ಲಿ ಮಾಜಿ ಸಚಿವ ರೇವಣ್ಣ ವಿರುದ್ಧ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಗರಂ ಆಗಿದ್ದಾರೆ.

ಭೀಮಾನಾಯ್ಕ

By

Published : Aug 7, 2019, 12:22 PM IST

ಬಳ್ಳಾರಿ: ಮಾಜಿ ಸಚಿವ ರೇವಣ್ಣ ವಿರುದ್ಧ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಗರಂ ಆಗಿದ್ದಾರೆ.

ಮಾಜಿ ಸಚಿವ ರೇವಣ್ಣ ವಿರುದ್ಧ ಶಾಸಕ ಭೀಮಾನಾಯ್ಕ ಗರಂ

ಜಿಲ್ಲೆಯ ವಿದ್ಯಾನಗರ ಮುಖ್ಯ ರಸ್ತೆಯಲ್ಲಿರೋ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಹಾಲು ಒಕ್ಕೂಟ ಮಹಾಮಂಡಳಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಶ್ವಾಸ ಮತಯಾಚನೆ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ತಾವು ಹಿಂದೆ ಸರಿಯೋದು ಬೇಡ ಎಂದರು.

ತಮ್ಮನ್ನು ಅಧ್ಯಕ್ಷರನ್ನಾಗಿಸುವ ಭರವಸೆಯನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಸಮ್ಮುಖದಲ್ಲೇ ನೀಡಿದ್ದಾರೆ. ಆದರೀಗ ರೇವಣ್ಣ ಅವರು ತಮ್ಮ ಮಾತಿನ ವರಸೆ ಬದಲಿಸಿದ್ದು, ಮೊನ್ನೆ ತಾನೇ ಪತ್ರಿಕೆಯಲ್ಲಿ ಅವರ ಹೇಳಿಕೆಯನ್ನು ಗಮನಿಸಿದೆ. ಭೀಮಾನಾಯ್ಕ ಇನ್ನೂ ಹುಡುಗ,‌ ಅವರಿಗೆಲ್ಲಾ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲಿಕ್ಕೆ ಆಗುತ್ತಾ ಎಂಬಿತ್ಯಾದಿ ಮಾತುಗಳನ್ನಾಡಿದ್ದಾರೆ.

ರೇವಣ್ಣ ಒಂಭತ್ತು ವರ್ಷ ಕೆಎಂಎಫ್​ನಲ್ಲಿ ಏನು ಮಾಡಿದ್ದಾರೆ ಅನ್ನೋದು ಗೊತ್ತಿದೆ. ಅವರು ಕೆಎಂಎಫ್ ದಿವಾಳಿ ಮಾಡಿದ್ದಾರೆ ಎಂದು ಅವರ ವಿರುದ್ಧ ಸಿಡಿದೆದ್ದರು.

ABOUT THE AUTHOR

...view details