ಕರ್ನಾಟಕ

karnataka

ETV Bharat / state

ಕೆಆರ್​ಪಿಪಿ ಅಭ್ಯರ್ಥಿ ಲಕ್ಷ್ಮಿ ಅರುಣಾ ನಾಮಪತ್ರ ಸಲ್ಲಿಕೆ.. ಅಭಿವೃದ್ಧಿಗಾಗಿ ಬೆಂಬಲಿಸಿ ಎಂದು ರೆಡ್ಡಿ ಪತ್ನಿ - ಚುನಾವಣಾಧಿಕಾರಿ ಪಾಲಿಕೆ ಆಯುಕ್ತ ಎಸ್ ಎನ್ ರುದ್ರೇಶ್

ಬಳ್ಳಾರಿ ನಗರದ ಅಭಿವೃದ್ಧಿಗಾಗಿ ಜನ ನನ್ನನ್ನು ಆಯ್ಕೆ ಮಾಡಬೇಕು ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕೆಆರ್​ಪಿಪಿ ಅಭ್ಯರ್ಥಿ ಲಕ್ಷ್ಮಿ ಅರುಣಾ ತಿಳಿಸಿದ್ದಾರೆ.

ಕೆಆರ್​ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ನಾಮಪತ್ರ ಸಲ್ಲಿಕೆ
ಕೆಆರ್​ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ನಾಮಪತ್ರ ಸಲ್ಲಿಕೆ

By

Published : Apr 17, 2023, 3:37 PM IST

ಕೆಆರ್​ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ

ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿರುವ ಗಾಲಿ ಲಕ್ಷ್ಮಿ ಅರುಣಾ ಸೋಮವಾರ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಲಕ್ಷ್ಮಿ ಅರುಣಾ ನಗರದ ಕನಕದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ನಗರದ ಅವಂಬಾವಿಯಲ್ಲಿರುವ ಸ್ವಗೃಹದಿಂದ ಆರಂಭವಾದ ಮೆರವಣಿಗೆಯು ಮಹಾನಗರ ಪಾಲಿಕೆ ಕಚೇರಿಗೆ ಬಂದು ಚುನಾವಣಾಧಿಕಾರಿ ಪಾಲಿಕೆ ಆಯುಕ್ತ ಎಸ್ ಎನ್ ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಕನಕ ದುರ್ಗಮ್ಮ ದೇವಸ್ಥಾನ ಬಳಿ ಕಾರ್ಯಕರ್ತರು ಲಕ್ಷ್ಮಿ ಅರುಣಾ ಅವರಿಗೆ ಕ್ರೇನ್ ಮೂಲಕ ಪುಟ್ಬಾಲ್ ಹಾರ ಹಾಕಿ ಸಂಭ್ರಮಿಸಿದರು.

ನಾಮಪತ್ರ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾದ ಲಕ್ಷ್ಮಿ ಅರುಣಾ, ನಾಮಪತ್ರ ಸಲ್ಲಿಸುತ್ತಿರುವ ಸಂದರ್ಭದಲ್ಲಿ ತಮ್ಮ ಪತಿ ಜನಾರ್ದನ ರೆಡ್ಡಿ ಅವರ ಅನುಪಸ್ಥಿತಿ ನೆನೆದು ಕಣ್ಣೀರು ಹಾಕಿದರು. ಬಳ್ಳಾರಿಯಲ್ಲಿ ಚುನಾವಣಾ ಕಣಕ್ಕಿಳಿಯುತ್ತಿರುವ ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಉಪಸ್ಥಿತರಿರಬೇಕಿತ್ತು ಎಂದು ಹೇಳಿದರು. ಎರಡು ನಿಮಿಷ ಮಾತನಾಡಲಾಗದೇ ಕಣ್ಣೀರು ಹಾಕಿದ ಲಕ್ಷ್ಮಿ ಅರುಣಾ ಅವರನ್ನು ಅವರ ಮಗಳು ಬ್ರಹ್ಮಿಣಿ ಸಮಾಧಾನ ಪಡಿಸಿದರು.

ಇದನ್ನೂ ಓದಿ:ನಮ್ಮದು ಶಿಸ್ತಿನ ಪಕ್ಷ, ಬಿಜೆಪಿ ಜಾತಿಗೆ ಅಷ್ಟೇ ಸೀಮಿತ: ಎಸ್​ ಎಸ್ ಮಲ್ಲಿಕಾರ್ಜುನ್ ಟಾಂಗ್​

ಬಳ್ಳಾರಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ: ನಂತರ ಮಾತನಾಡಿದ ಲಕ್ಷ್ಮಿ ಅರುಣಾ, ಜನಾರ್ದನ ರೆಡ್ಡಿ ಅವಧಿಯಲ್ಲಿ ಬಳ್ಳಾರಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಅವರ ಅವಧಿಯಲ್ಲಿ ಶುರು ಆದ ಕೆಲ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಗಳು ಪೂರ್ಣಗೊಳಿಸಬೇಕಾದ ಜವಾಬ್ದಾರಿ ಇದೆ. ಬಳ್ಳಾರಿ ಅಭಿವೃದ್ಧಿಯ ಕನಸನ್ನು ಪೂರ್ಣ ಗೊಳಿಸುವ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿ ನನ್ನ ಹೆಗಲ ಮೇಲೆ ಹಾಕಿದ್ದಾರೆ. ಅದಕ್ಕಾಗಿ ನನ್ನನ್ನು ಜನಾರ್ದನ ರೆಡ್ಡಿ ಅವರು ಕಣಕ್ಕಿಳಿಸಿದ್ದಾರೆ. ಬಳ್ಳಾರಿ ನಗರದ ಅಭಿವೃದ್ಧಿಗಾಗಿ ನನ್ನನ್ನ ಜನರು ಆಯ್ಕೆ ಮಾಡಬೇಕು ಎಂದು ಇದೇ ವೇಳೆ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಮತದಾರರಲ್ಲಿ ಮನವಿ ಮಾಡಿದರು.

ಜನರೇ ತಕ್ಕ ಪಾಠ ಕಲಿಸುತ್ತಾರೆ: ನಮ್ಮ ಪಕ್ಷದಲ್ಲಿ ಲೀಡರ್‌ಗಳು ಇಲ್ಲ ಅಂತಾ ಕೆಲವರು ಟೀಕೆ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರೇ ನಮ್ಮ ಪಕ್ಷದ ಲೀಡರ್‌ಗಳು. ಅವರೇ ನಮ್ಮ ಶಕ್ತಿ ಎಂದು ಹೇಳಿದ ಲಕ್ಷ್ಮಿ ಅರುಣಾ, ನಮ್ಮ ವಿರೋಧಿಗಳಿಗೆ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಶಾಸಕ ಸೋಮಶೇಖರ್ ರೆಡ್ಡಿ ಅವರ ವಿರುದ್ಧವೂ ಪರೋಕ್ಷವಾಗಿ ಅರುಣಾ ವಾಗ್ದಾಳಿ ನಡೆಸಿದರು. ಈ ವೇಳೆ ಲಕ್ಷ್ಮಿ ಅರುಣಾಗೆ ಮಗಳು ಬ್ರಹ್ಮಿಣಿ, ಅಳಿಯ ರಾಜೀವ್ ರೆಡ್ಡಿ, ತಂದೆ ಪರಮೇಶ್ವರ್ ರೆಡ್ಡಿ, ತಾಯಿ ನಾಗಲಕ್ಷ್ಮಿ ಸಾಥ್ ನೀಡಿದರು.

ಇದನ್ನೂ ಓದಿ :ಸಜ್ಜನ ಶೆಟ್ಟರ್ ದುರ್ಜನ ಸಂಘ ಸೇರುತ್ತಿರುವುದು ದುರ್ದೈವ: ಸಿಎಂ ಬೊಮ್ಮಾಯಿ

ABOUT THE AUTHOR

...view details