ಕರ್ನಾಟಕ

karnataka

ETV Bharat / state

ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರೆಯ ಹಿನ್ನೀರು!

ಹೊಸಪೇಟೆಯ ತುಂಗಭದ್ರ ಜಲಾಶಯದ ಸುತ್ತಮುತ್ತಲಿರುವ ಕಾರ್ಖಾನೆಗಳು ವಿಷಕಾರಕ ರಸಾಯನಿಕಗಳು ನೇರವಾಗಿ ನದಿಗೆ ಬಿಡುವುದರಿಂದ ತುಂಗಭದ್ರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ.

hospet tungadra dam water changed to green color
ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರೆಯ ಹಿನ್ನೀರು

By

Published : Sep 2, 2020, 6:05 PM IST

ಹೊಸಪೇಟೆ: ತುಂಗಭದ್ರೆಯ ಹಿನ್ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಹೊಲ, ಗದ್ದೆಗಳ ರಸಗೊಬ್ಬರ, ಕಾರ್ಖಾನೆಗಳು ನದಿಗೆ ಬಿಡುವ ರಸಾಯನಿಕ ತ್ಯಾಜ್ಯದಿಂದ ಹಸಿರು ಬಣ್ಣ ಉತ್ಪತ್ತಿಯಾಗುತ್ತದೆ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ.

ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರೆಯ ಹಿನ್ನೀರು

ಸಯನೋ ಬ್ಯಾಕ್ಟಿರಿಯಾದಿಂದ ಬ್ಲೂ ಗ್ರೀನ್‌ ಆಲ್ಗಿ ಉತ್ಪತ್ತಿಯಾಗುತ್ತದೆ. ತುಂಗಭದ್ರಾ ಜಲಾಶಯಕ್ಕೆ ಮಲೆನಾಡಿನಿಂದ ನೀರು ಹರಿದು ಬರುತ್ತದೆ. ಅಲ್ಲಿನ ಕಾಫಿ, ತೆಂಗು, ಅಡಿಕೆ ತೋಟಗಳಿಗೆ ಹೆಚ್ಚಾಗಿ ರಸಾಯನಿಕ ಬಳಸಲಾಗುತ್ತದೆ. ಹೊಲ, ಗದ್ದೆಗಳಲ್ಲಿ ರಸಗೊಬ್ಬರ ಹಾಕಲಾಗುತ್ತದೆ. ಜಲಾಶಯದ ಸುತ್ತಮುತ್ತಲಿರುವ ಕಾರ್ಖಾನೆಗಳು ವಿಷಕಾರಕ ರಸಾಯನಿಕಗಳು ನೇರವಾಗಿ ನದಿಗೆ ಬಿಡುತ್ತವೆ. ಎಲ್ಲವೂ ಸೇರಿಕೊಂಡು ಸಯಾನೋ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡು, ಇಡೀ ನೀರನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತವೆ’ ಎನ್ನುತ್ತಾರೆ ಪರಿಸರ ತಜ್ಞ ಸಮದ್‌ ಕೊಟ್ಟೂರು.

ಇನ್ನು ನೀರು ಹಸಿರಾದಾಗ ಯಾರು ಸಹ ನೀರನ್ನು ನೇರವಾಗಿ ಕುಡಿಯುವುದಕ್ಕೆ ಬಳಸಬಾರದು.. ಅಷ್ಟೇ ಅಲ್ಲ, ಜಾನುವಾರುಗಳಿಗೂ ಕುಡಿಸಬಾರದು. ಇಂತಹ ಸಂದರ್ಭದಲ್ಲಿ ನೀರಿನಲ್ಲಿ ಈಜಾಡಿದರೆ ಚರ್ಮ ಕಾಯಿಲೆಗಳು ಬರುವ ಸಾಧ್ಯತೆಯೂ ಇರುತ್ತದೆ. ನೀರಿನ ಬಣ್ಣ ಸಹಜ ಸ್ಥಿತಿಗೆ ಬರುವವರೆಗೆ ಜನ ಎಚ್ಚರದಿಂದ ಇರಬೇಕು ಎಂದು ಸೂಚಿಸಿದ್ರು.

ABOUT THE AUTHOR

...view details