ಹೊಸಪೇಟೆ:ನಗರದ ಚಿತ್ತವಾಡ್ಗಿ ವರಕೇರಿ ಪ್ರದೇಶದ ದೇವಸ್ಥಾನದ ಆವರಣದಲ್ಲಿ ಅಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಪ್ರವಚನ ನಡೆಸಿದರು.
ಹೊಸಪೇಟೆ: ದೇವಸ್ಥಾನದ ಆವರಣಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ - Hosapete latest news
ಹೊಸಪೇಟೆಯಲ್ಲಿ ಶಿಕ್ಷಕರು ದೇವಸ್ಥಾನದ ಆವರಣದಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಸಿದರು.
ಈ ವೇಳೆ ವರಕೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರನಾಥ ಅವರು ಮಾತನಾಡಿ, ಶಾಲೆ ತೆರೆಯಲು ಸರ್ಕಾರದಿಂದ ಆದೇಶ ಬಂದಿಲ್ಲ. ಕೊರೊನಾ ನಿಯಮಗಳೊಂದಿಗೆ ದೇವಸ್ಥಾನದಲ್ಲಿ ಆವರಣದಲ್ಲಿ ಕಲಿಸಲಾಗುತ್ತಿದೆ ಎಂದರು.
20 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಒಂದೇ ಕಡೆ ಸೇರಿಸುವಂತಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿತ್ತದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ1 ಗಂಟೆ ವರೆಗೆ ಕಲಿಸಲಾಗುತ್ತಿದೆ. ಹೋಂ ವರ್ಕ್ ಮೂಲಕ ಕಲಿಕೆ ಉತ್ತೇಜನ ನೀಡಲಾಗುತ್ತಿದೆ. ಸ್ಲಂ ಪ್ರದೇಶವಾಗಿದ್ದರಿಂದ ಮನೆಯಲ್ಲಿ ಪೋಷಕರು ಇರುವುದಿಲ್ಲ. ಕೆಲಸಕ್ಕಾಗಿ ಹೊರಗಡೆ ಹೋಗಿರುತ್ತಾರೆ. ಸಾಧ್ಯವಾಗದಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲಾಗುತ್ತಿದೆ ಎಂದು ಹೇಳಿದರು.