ಕರ್ನಾಟಕ

karnataka

ETV Bharat / state

ಹಂಪಿಯ ಭದ್ರತಾ ಸಿಬ್ಬಂದಿ ಮೇಲೆ ವಿದೇಶಿ ಪ್ರವಾಸಿಗನಿಂದ ಹಲ್ಲೆ.. - ಸಿಬ್ಬಂದಿ​​ಗೆ ಗನ್ ಬ್ಯಾರಲ್​ನಿಂದ ಹಲ್ಲೆ

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಕಮಲ ಮಹಲ್​ಗೆ ಬಂದಿದ್ದ ವಿದೇಶಿ ಪ್ರವಾಸಿಗ, ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.

ಭದ್ರತಾ ಸಿಬ್ಬಂದಿ ಮೇಲೆ ವಿದೇಶಿ ಪ್ರವಾಸಿಗ ಹಲ್ಲೆ

By

Published : Sep 22, 2019, 11:20 PM IST

ಬಳ್ಳಾರಿ:ಹಂಪಿಗೆ ಆಗಮಿಸಿದ ವಿದೇಶಿ ಪ್ರವಾಸಿಗನೊಬ್ಬ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಭದ್ರತಾ ಸಿಬ್ಬಂದಿ ತಲೆಗೆ ಗಾಯವಾಗಿದೆ.

ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಕಮಲ ಮಹಲ್​ನ ಮೇಲ್ಭಾಗ ಹತ್ತಲು ವಿದೇಶಿಗ ಮುಂದಾಗಿದ್ದಾನೆ‌. ಅದರ ಮೇಲೆ ಹತ್ತುವ ಅವಕಾಶವಿಲ್ಲ ಎಂದು ಸಿಬ್ಬಂದಿ ಆತನನ್ನು ತಡೆದಿದ್ದಾನೆ‌. ಅದನ್ನು ಲೆಕ್ಕಿಸದೇ ವಿದೇಶಿಗ ಮೇಲೆ ಏರಿದ್ದಾನೆ.

ಭದ್ರತಾ ಸಿಬ್ಬಂದಿ ಮೇಲೆ ವಿದೇಶಿ ಪ್ರವಾಸಿಗನಿಂದ ಹಲ್ಲೆ..

ಸಿಬ್ಬಂದಿ ಧರ್ಮರಾಜ್ ಮೇಲೆ ವಿದೇಶಿ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಗಾಂಜ ಸೇವನೆ ಮಾಡಿ ವಿದೇಶಿ ವ್ಯಕ್ತಿ ಕಮಲ್ ಮಹಲ್ ಮೇಲಿನಿಂದ ಜಿಗಿದು ಸಿಬ್ಬಂದಿಗೆ ಕಾಲಿನಿಂದ ಒದ್ದಿದ್ದಾನೆ. ಆಗ ಗನ್ ಕೆಳಗೆ ಬಿದ್ದಿದೆ. ಆದನ್ನು ಹಿಡಿದ ವಿದೇಶಿಗ ಗನ್ ಮ್ಯಾನ್, ಸಿಬ್ಬಂದಿ ಮೇಲೆ ಫೈರ್​​ ಮಾಡಲು ಮುಂದಾಗಿದ್ದಾನೆ. ಬಳಿಕ ಪ್ರವಾಸಿಗರು ಕಮಲ್ ಮಹಲ್​ನಿಂದ ಹೊರಗಡೆ ಓಡಿ ಬಂದಿದ್ದಾರೆ.

ಆದರೆ, ಬಂದೂಕಿನಲ್ಲಿ ಗುಂಡು ಇಲ್ಲದ ಕಾರಣ ಯಾವುದೇ ಸಾವು ಆಗಿಲ್ಲ. ಸಿಬ್ಬಂದಿ​​ಗೆ ಗನ್ ಬ್ಯಾರಲ್​ನಿಂದ ತಲೆಗೆ ಹೊಡೆದಿದ್ದಾನೆ. ಸಿಬ್ಬಂದಿ ಧರ್ಮರಾಜ್ ತಲೆಗೆ ಗಾಯವಾಗಿದೆ‌. ಗಾಯಗೊಂಡ ಸಿಬ್ಬಂದಿ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details