ಬಳ್ಳಾರಿ:ಲಾರಿಗೆ ಲೋಡ್ ಮಾಡಿದ್ದ ಮೆಣಸಿನಕಾಯಿ ಚೀಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 400 ಚೀಲದಷ್ಟು ಮೆಣಸಿನಕಾಯಿ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಏಳುಬೆಂಚೆ ಗ್ರಾಮದಲ್ಲಿ ನಡೆದಿದೆ.
ಮೆಣಸಿನಕಾಯಿ ಚೀಲಗಳಿಗೆ ಬೆಂಕಿ: ಲಕ್ಷಗಟ್ಟಲೆ ಹಣ ನಷ್ಟ - ಮೆಣಸಿನಕಾಯಿ ಚೀಲಗಳಿಗೆ ಬೆಂಕಿ
ಲಾರಿಯಲ್ಲಿ ಸಂಗ್ರಹಿಸಿದ್ದ ಮೆಣಸಿನಕಾಯಿ ಚೀಲಕ್ಕೆ ಬೆಂಕಿ ತಗುಲಿ ಎಲ್ಲವೂ ಸುಟ್ಟು ಕರಕಲಾಗಿರುವ ಘಟನೆ ಕುರುಗೋಡು ತಾಲೂಕಿನ ಏಳುಬೆಂಚೆ ಗ್ರಾಮದಲ್ಲಿ ನಡೆದಿದೆ.
ಮೆಣಸಿನಕಾಯಿ ಚೀಲಗಳಿಗೆ ಬೆಂಕಿ
ಏಳುಬೆಂಚೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ವಿರುಪಾಕ್ಷಯ್ಯ ಸ್ವಾಮಿ ಎಂಬ ರೈತ ಮೆಣಸಿನಕಾಯಿ ಮೂಟೆಗಳನ್ನು ಲಾರಿಗೆ ಲೋಡ್ ಮಾಡಿದ್ದು, ಆಕಸ್ಮಿಕವಾಗಿ ಚೀಲಗಳಿಗೆ ಬೆಂಕಿ ತಾಗಿ ಸುಮಾರು 15 ಲಕ್ಷ ರೂಪಾಯಿ ನಷ್ಟ ಆಗಿದೆ.
ಬೆಂಕಿ ನಂದಿಸಲು ಗ್ರಾಮದ ಜನತೆ ಹರಸಾಹಸ ಪಟ್ಟರು ಸಾಧ್ಯವಾಗಿಲ್ಲ. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.