ಹೊಸಪೇಟೆ: ಅನುಮಾನಾಸ್ಪದವಾಗಿ ಮೃತಪಟ್ಟ ನವವಿವಾಹಿತೆ ಗೌಸಿಯಾ ಸಾವಿನ ವರದಿಯನ್ನು ನೀಡಬೇಕು ಎಂದು ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದ ಚಿತ್ತವಾಡ್ಗಿ ಪೊಲೀಸ್ ಠಾಣೆಯ ಮುಂದೆ ಆಗ್ರಹಿಸಿದರು.
ಅನುಮಾನಾಸ್ಪದವಾಗಿ ಮೃತಪಟ್ಟ ಗೌಸಿಯಾ ಸಾವಿನ ವರದಿಗೆ ಕುಟುಂಬಸ್ಥರ ಆಗ್ರಹ - hospet latest news
ಹೊಸಪೇಟೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ನವವಿವಾಹಿತೆ ಗೌಸಿಯಾ ಸಾವಿನ ವರದಿಯನ್ನು ನೀಡಬೇಕೆಂದು ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಗೌಸಿಯಾ ಕುಟುಂಬಸ್ಥರು
ನವ ವಿವಾಹಿತೆ ಗೌಸಿಯಾ ಮೃತ ಪಟ್ಟು 11 ದಿನಗಳು ಕಳೆದಿವೆ. ಆದರೆ, ಈರೆಗೂ ಸಾವಿನ ವರದಿ ನೀಡಿಲ್ಲ. ಪೊಲೀಸರು ಕಾನೂನು ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ಇದನ್ನು ಖಂಡಿಸಿ ಸೆ.21 ರಂದು ನಗರದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿತ್ತವಾಡ್ಗಿ ಪೊಲೀಸರಿಗೆ ಸಾವಿನ ವರದಿ ನೀಡಬೇಕೆಂದು ಕೇಳಿದರೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ. ಪದೇ ಪದೆ ಪೊಲೀಸ್ ಠಾಣೆಗೆ ಓಡಾಡುವಂತಾಗಿದೆ. ತಂಗಿಯ ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿದವು.