ಬಳ್ಳಾರಿ:ಜಿಲ್ಲೆಯ ಎರಡು ಗ್ರಾಮಗಳಲ್ಲಿ ಜೀವಂತವಿದ್ದ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಬಳ್ಳಾರಿ ಉಪ ವಿಭಾಗದ ಅಬಕಾರಿ ಇಲಾಖೆಯು ಯಶಸ್ಸು ಕಂಡಿದೆ.
ಗಣಿನಾಡಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಬಿತ್ತು ಶಾಶ್ವತ ಬ್ರೇಕ್! - kannadanews
ಗಣಿನಾಡು ಬಳ್ಳಾರಿಯಲ್ಲಿ ಇನ್ನೂ ಜೀವಂತವಿದ್ದ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಅಬಕಾರಿ ಇಲಾಖೆ ಯಶಸ್ವಿಯಾಗಿದೆ.

ಜಿಲ್ಲೆಯ ಬಳ್ಳಾರಿ ತಾಲೂಕಿನ ಬೆಳಗಲ್ಲು-ಹೊನ್ನಳ್ಳಿ ತಾಂಡಗಳಲ್ಲಿ ವಿಪರೀತವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ನಡೆಯುತ್ತಿರುವ ಮಾಹಿತಿ ಬಂದ ಕ್ಷಣದಲ್ಲಿಯೇ ಅಬಕಾರಿ ಇಲಾಖೆಯ ಉಪಾಧೀಕ್ಷಕರು ಅದರ ಕಡಿವಾಣಕ್ಕೆ ಮುಂದಾಗಿದ್ದಾರೆ. ಬಳ್ಳಾರಿ ಉಪ ವಿಭಾಗದ ಅಬಕಾರಿ ಇಲಾಖೆ ಅಧೀಕ್ಷಕ ಜಗದೀಶ್ ನಾಯ್ಕ ಅವರ ಮಾರ್ಗದರ್ಶನದ ಮೇರೆಗೆ ಉಪಾಧೀಕ್ಷಕರಾದ ಮೋತಿಲಾಲ್, ವಿನೋದ ಹಾಗೂ ಸಿಬ್ಬಂದಿ ಮುಂದಾಗಿ ಅದರಲ್ಲಿ ಯಶ ಕಂಡಿದ್ದಾರೆ.
ಅಬಕಾರಿ ಇಲಾಖೆಯ ಉಪಾಧೀಕ್ಷಕ ಮೋತಿಲಾಲ್ ಹೇಳೋ ಪ್ರಕಾರ, ಈ ಹಿಂದೆ ಕಳ್ಳಭಟ್ಟಿ ಸಾರಾಯಿ ಮಾರಾಟದ ಜಾಲ ಬೆಳಗಲ್ ಮತ್ತು ಹೊನ್ನಳ್ಳಿ ತಾಂಡಾಗಳಲ್ಲಿ ನಡೆಯುತ್ತಿತ್ತು. ಅದರೀಗ ಅಲ್ಲಿ ನಡೆಯುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ ಮೇಲಿಂದ ಮೇಲೆ ದಾಳಿ ಹೆಚ್ಚಾದಂತೆಲ್ಲಾ ಈಗ ಕಳ್ಳಭಟ್ಟಿ ಸಾರಾಯಿ ಮಾರಾಟ ಸಂಪೂರ್ಣವಾಗಿ ನಿಂತಿದೆ ಎಂದು ತಿಳಿಸಿದ್ದಾರೆ. ತಿಂಗಳಲ್ಲಿ ಐದಾರು ಬಾರಿ ದಾಳಿ ಕಾರ್ಯಾಚರಣೆ ನಡೆಸಿದ್ದಲ್ಲದೇ ಜಾಗೃತಿ ಮೂಡಿಸುವ ಕಾರ್ಯವನ್ನೂ ಕೂಡ ನಾವು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ. ಹೀಗಾಗಿ, ಕಳ್ಳಭಟ್ಟಿ ಸಾರಾಯಿ ಮಾರಾಟ ಸಂಪೂರ್ಣ ನಿಂತುಹೋಗಿದೆ ಎಂದು ತಿಳಿಸಿದ್ದಾರೆ.