ಹೊಸಪೇಟೆ (ವಿಜಯನಗರ): ಬಳ್ಳಾರಿ ಮಹಾನಗರ ಚುನಾವಣೆ ಪೂರ್ಣಗೊಂಡು ನಾಲ್ಕು ತಿಂಗಳು ಕಳೆದಿದೆ. ಅದರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದೆ. ಆದರೆ, ಈವರೆಗೂ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸಿಲ್ಲ. ಈ ತರಹ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿಯಲ್ಲಿ ಮಾಡಬಾರದು ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಗ್ರಹಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿರುವುದು.. ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಬಿಜೆಪಿಗೆ ಬಹುಮತ ಬರದೇ ಇರುವ ಕಡೆ, ಆಪರೇಷನ್ ಕಮಲ ಮಾಡುವ ಆಲೋಚನೆ ಇರಬಹುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಎಸೆಗುವ ದ್ರೋಹ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು 'ಓಲ್ಡ್ ವೈನ್ ಇನ್ ನ್ಯೂ ಬಾಟಲ್' ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಹೈಜಾಕ್ ಮಾಡಿ ಹೆಸರು ಇಡುವ ಕೆಲಸವನ್ನು ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯಕ್ರಮವನ್ನು ರೂಪಿಸಿ ಹೆಸರು ಮಾಡಿದ್ರೆ,ಶಬ್ಬಾಸ್ ಗಿರಿ ಕೊಡಬಹುದಿತ್ತು. ಕಾರ್ಯಕ್ರಮಗಳನ್ನು ರೂಪಿಸದಂತ ಬೌದ್ಧಿಕ ದಿವಾಳಿತನ ಬಿಜೆಪಿಗಿದೆ ಎಂದು ಟೀಕಿಸಿದರು.
ನರೇಂದ್ರ ಮೋದಿ ಅವರು ದುರಂಹಕಾರಿ ಪ್ರಧಾನಿ. ರಾಮ ನಾಮ ಜಪಿಸುವ ದೇಶದಲ್ಲಿ ಪೆಟ್ರೋಲ್ ದರ 100ರೂ. ದಾಟಿದೆ. ಅದೇ, ರಾವಣ ದೇಶವಾದ ಶ್ರೀಲಂಕಾದಲ್ಲಿ 53 ರೂ., ಇನ್ನು ಸೀತೆಯ ನಾಡಾದ ನೇಪಾಳದಲ್ಲಿ 50 ರೂ. ಆಸುಪಾಸಿದೆ. ಇನ್ನು, ಪಾಕಿಸ್ತಾನದಲ್ಲೂ ಸಹ ಪೆಟ್ರೋಲ್ ದರ 52 ರೂ. ಇದೆ ನಮ್ಮಲ್ಲಿ ಮಾತ್ರ ಹೆಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹು-ಧಾ ಮಹಾನಗರ ಪಾಲಿಕೆ ಫಲಿತಾಂಶ: ಗೆಲುವಿನ ಸನಿಹದಲ್ಲಿ ಎಡವಿದ ಬಿಜೆಪಿ, ಕಾಂಗ್ರೆಸ್ನಿಂದ ಭರ್ಜರಿ ಟಕ್ಕರ್!