ಹೊಸಪೇಟೆ(ಬಳ್ಳಾರಿ):ಹೋಟೆಲ್‌ನೊಳಗೆ ಲಾರಿ ನುಗ್ಗಿದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಧರ್ಮಾಪುರ ಗ್ರಾಮದ ಹೆಚ್.ಆರ್.ಜಿ ಬೈಪಾಸ್ ಬಳಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ನೊಳಗೇ ನುಗ್ಗಿದ ಲಾರಿ, ಅಪಘಾತದಲ್ಲಿ ಯುವಕ ಸಾವು - Lorry crash into the hotel
ಲಾರಿ ಚಾಲಕ ವಾಹನವನ್ನು ಹಿಂಬದಿಗೆ ಚಲಾಯಿಸುತ್ತಿದ್ದಾಗ ಹೋಟೆಲ್‌ನೊಳಗಡೆ ವಾಹನ ನುಗ್ಗಿದೆ..
ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಒಳಗೇ ಲಾರಿ ನುಗ್ಗಿದ ಲಾರಿ: ಯುವಕ ಸಾವು
ಸುನೀಲ್ (18) ಎಂಬಾತ ಮೃತ ದುರ್ದೈವಿ. ಕಟ್ಟಿ ಹೊಲತಾಂಡ ಮರಿಯಮ್ಮನಹಳ್ಳಿಯ ನಿವಾಸಿ. ಲಾರಿ ಚಾಲಕ ವಾಹನವನ್ನು ಹಿಂಬದಿಗೆ ಚಲಾಯಿಸುತ್ತಿದ್ದಾಗ ಹೋಟೆಲ್‌ನೊಳಗಡೆ ವಾಹನ ನುಗ್ಗಿದೆ. ಆಗ ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ನೊಳಗಡೆಯಿದ್ದ ಯುವಕ ಸುನೀಲ್ ಮೇಲೆಯೇ ಲಾರಿ ಹರಿದಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Last Updated : Sep 30, 2020, 9:05 PM IST