ಕರ್ನಾಟಕ

karnataka

ETV Bharat / state

ಬಳ್ಳಾರಿ: ಪಾರ್ಕ್​ಗಳು ಒತ್ತುವರಿಯಾಗಿಲ್ಲ, ಅಭಿವೃದ್ಧಿ ಇಲ್ಲವೇ ಇಲ್ಲ

ಬಳ್ಳಾರಿ ಮಹಾನಗರದಲ್ಲಿರುವ ಪಾರ್ಕ್​​ಗಳು ಅಭಿವೃದ್ಧಿಯಿಂದ ದೂರ ಉಳಿದಿದ್ದು, ಉದ್ಯಾನಕ್ಕೆ ವಾಯುವಿಹಾರಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಅವುಗಳ ನಿರ್ವಹಣೆ ಮರೀಚಿಕೆಯಾಗಿತ್ತು.

By

Published : Sep 24, 2020, 5:58 PM IST

PARK
ಪಾರ್ಕ್​​

ಬಳ್ಳಾರಿ:ಮಹಾನಗರ ಪಾಲಿಕೆ ವ್ಯಾಪ್ತಿಯ ಅಂದಾಜು 35 ವಾರ್ಡ್​​ಗಳಲ್ಲಿ 111 ಉದ್ಯಾನಗಳಿದ್ದು, ಯಾವೊಂದು ಪಾರ್ಕ್​​ ಕೂಡ ಅತಿಕ್ರಮಕ್ಕೆ ಒಳಗಾಗಿಲ್ಲ. ಆದರೆ, ಪಾರ್ಕ್​​ಗಳ ಅಭಿವೃದ್ಧಿ ಮಾತ್ರ ಅಷ್ಟಕಷ್ಟೆ. ಉದ್ಯಾನದ ಪ್ರದೇಶಗಳು ತುಂಬಾ ಪಾಳು ಬಿದ್ದಿದ್ದು, ಸುಂದರವಾದ ಪಾರ್ಕ್​​ಗಳು ಹದಗೆಟ್ಟು ಹೋಗಿವೆ. ಇದರಿಂದಾಗಿ ವಾಯುವಿಹಾರಿಗಳೂ ಅತ್ತ ಮುಖ ಮಾಡಲು ಇಚ್ಚಿಸುತ್ತಿಲ್ಲ. ಇತ್ತ ಲಾಕ್​ಡೌನ್​ ಸಂದರ್ಭದಲ್ಲೂ ಅವುಗಳ ನಿರ್ವಹಣೆ ಮಾಡಿಲ್ಲ.

ಎಸಿ ಸುಪರ್ದಿಗೆ ಡಾ.ರಾಜ್ ಪಾರ್ಕ್​: ಪಾಲಿಕೆ ಕಚೇರಿಯ ಹಿಂಭಾಗದಲ್ಲಿರುವ ಡಾ.ರಾಜ್ ಉದ್ಯಾನವನ್ನು ಬಳ್ಳಾರಿ ಉಪವಿಭಾಗಾಧಿಕಾರಿ ಸುಪರ್ದಿಗೆ ವಹಿಸಲಾಗಿದೆ. ಕೈಗೆಟುಕುವ ದರದಲ್ಲಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಈ ಉದ್ಯಾನದಲ್ಲಿ ಬೋಟಿಂಗ್ ‌ವ್ಯವಸ್ಥೆಯೂ ಇದೆ.‌ ಉದ್ಯಾನದ ಅಭಿವೃದ್ಧಿಗೆ ಅನುದಾನವನ್ನೂ ಮೀಸಲಿರಿಸಲಾಗಿದೆ ಎಂದು ಎಸಿ ರಮೇಶ ಕೋನರೆಡ್ಡಿ ತಿಳಿಸಿದ್ದಾರೆ.

ABOUT THE AUTHOR

...view details