ಕರ್ನಾಟಕ

karnataka

ETV Bharat / state

ಕೂಡ್ಲಿಗಿಯಲ್ಲಿ ಒಂದು ಕಿ.ಮೀ. ನಡೆದು ಕೋವಿಡ್ ಆಸ್ಪತ್ರೆ ತಲುಪಿದ ಸೋಂಕಿತ! - corona latest news

ಕೋವಿಡ್ ಟೆಸ್ಟ್​ಗೆ ಒಳಗಾಗಿದ್ದ ವ್ಯಕ್ತಿಯ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಅ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕಿದ್ದ ಕೂಡ್ಲಿಗಿ ಪಟ್ಟಣದ ಆರೋಗ್ಯ ಅಧಿಕಾರಿಗಳು ಯಾವುದೇ ವ್ಯವಸ್ಥೆ ಮಾಡದಿರುವುದಕ್ಕೆ ಬೇಸತ್ತು ತಾನಿದ್ದ ಸ್ಥಳದಿಂದ ಬ್ಯಾಗ್​ ಹಿಡಿದು ಆಸ್ಪತ್ರೆಗೆ ನಡೆದುಕೊಂಡು ಬಂದಿದ್ದಾನೆ.

Corona patient
ಒಂದು ಕಿ.ಮಿ ನಡೆದು ಕೋವಿಡ್ ಆಸ್ಪತ್ರೆ ತಲುಪಿದ ಸೋಂಕಿತ

By

Published : Jul 14, 2020, 12:01 PM IST

ಬಳ್ಳಾರಿ: ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಸುಮಾರು ಒಂದು ಕಿಲೋ ಮೀಟರ್​ ದೂರವನ್ನು ನಡೆದುಕೊಂಡು ಹೋಗಿ ಕೋವಿಡ್​ ಆಸ್ಪತ್ರೆ ತಲುಪಿರುವ ಘಟನೆ ಕೂಡ್ಲಿಗಿ ಪಟ್ಟಣದಲ್ಲಿ ನಡೆದಿದೆ.

ಕೋವಿಡ್ ಟೆಸ್ಟ್​ಗೆ ಒಳಗಾಗಿದ್ದ ವ್ಯಕ್ತಿಯ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಅ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕಿದ್ದ ಕೂಡ್ಲಿಗಿ ಪಟ್ಟಣದ ಆರೋಗ್ಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗ್ತಿದೆ. ಇದರಿಂದ ಬೇಸತ್ತ ವ್ಯಕ್ತಿ ತಾನಿದ್ದ ಸ್ಥಳದಿಂದ ಬ್ಯಾಗ್​ ಹಿಡಿದು ಆಸ್ಪತ್ರೆಗೆ ನಡೆದುಕೊಂಡು ಬಂದಿದ್ದಾನೆ.

ಒಂದು ಕಿ.ಮೀ. ನಡೆದು ಕೋವಿಡ್ ಆಸ್ಪತ್ರೆ ತಲುಪಿದ ಸೋಂಕಿತ

ಅ್ಯಂಬುಲೆನ್ಸ್ ಬರುತ್ತದೆ ಎಂದು ಕಾದು ಕಾದು ಸುಸ್ತಾಗಿದ್ದೆ. ಅದು ಬಾರದ ಕಾರಣ ನಾನೇ ನಡೆದುಕೊಂಡು ಬಂದು ಆಸ್ಪತ್ರೆ ಸೇರಿದೆ. ಅಂದಾಜು ಒಂದು ಕಿಲೋ ಮೀಟರ್​ ದೂರದಿಂದ ನಡೆದುಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಆರೋಗ್ಯಾಧಿಕಾರಿಗಳ ಈ ಅಮಾನವೀಯ ಘಟನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details